Novak Djokovic: 378ನೇ ವಾರ ನಂಬರ್ 1 ಆಗಿ ವಿಶ್ವದಾಖಲೆ ಬರೆದ ನೊವಾಕ್ ಜೊಕೊವಿಕ್

ಟೆನಿಸ್‌ನ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ ವಿಶ್ವದಾಖಲೆ ಬರೆದಿದ್ದಾರೆ. ಶ್ರೇಯಾಂಕ ಪಟ್ಟಿಯಲ್ಲಿ ನಿವಾಕ್ ಜೊಕೊವಿಕ್ 378ನೇ ವಾರ ನಂಬರ್ 1 ಆಟಗಾರನಾಗಿ ಮುಂದುವರಿಯುವ ಮೂಲಕ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಕಾಲ ಈ ಸ್ಥಾನದಲ್ಲಿ ಮುಂದುವರಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಜರ್ಮನ್ ದಿಗ್ಗಜ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಹೆಸರಿನಲ್ಲಿದ್ದ ದಾಖಲೆ ಮುರಿದ್ದಾರೆ.
ಕಳೆದ ವಾರ 377 ವಾರಗಳ ಕಾಲ ನಂಬರ್ 1 ಆಗಿದ್ದ ಸ್ಟೆಫಿ ಗ್ರಾಫ್ ದಾಖಲೆಯನ್ನು ಜೊಕೊವಿಕ್ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಬಗ್ಗೆ ಜೊಕಿವಿಕ್ ವಿಡಿಯೋ ಸಂದೇಶವನ್ನು ಎಟಿಪಿ ಹಂಚಿಕೊಂಡಿದೆ. ಇದರಲ್ಲಿ ಜೊಕೊವಿಕ್ "ಬಹಳ ವರ್ಷಗಳಿಂದ ನೀವು ನನಗೆ ನೀಡಿದ ನಿಮ್ಮ ಪ್ರೀತಿ ಮತ್ತು ದೊಡ್ಡ ಶಕ್ತಿಯಿಂದ ನನ್ನ ವೃತ್ತಿಜೀವನದುದ್ದಕ್ಕೂ ನಾನು ಅನೇಕ ಅದ್ಭುತ ಸಾಧನೆಗಳನ್ನು ಸಾಧಿಸಲು ಯಶಸ್ವಿಯಾಗಿದ್ದೇನೆ" ಎಂದಿದ್ದಾರೆ.
"ನಂ. 1 ಶ್ರೇಯಾಂಕದಲ್ಲಿ 378 ವಾರಗಳ ದಾಖಲೆಯನ್ನು ಮುರಿದಿರುವುದು ತೀರಾ ಇತ್ತೀಚಿನ ದಾಖಲೆಯಾಗಿದೆ. ಪುರುಷರ ಹಾಗೂ ಮಹಿಳೆಯರ ಟೆನಿಸ್‌ನಲ್ಲಿ ಇದುವರೆಗೆ ಆಡಿದ ಶ್ರೇಷ್ಠ ಹಾಗೂ ಅತ್ಯಂತ ಪ್ರಸಿದ್ಧ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದಾರೆ ಸ್ಟೆಫಿ ಗ್ರಾಫ್. ಅವರ ಸಾಧನೆಯನ್ನು ಮೀರಿದ ಕಾರಣಕ್ಕಾಗಿ ನಿಸ್ಸಂಶಯವಾಗಿ ಅತ್ಯಂತ ಹೆಮ್ಮೆ ಮತ್ತು ಸಂತೋಷವಾಗಿದೆ" ಎಂದಿದ್ದಾರೆ ನಿವಾಕ್ ಜೊಕೊವಿಕ್.
ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ನೊವಾಕ್ ಜೊಕೊವಿಕ್ ಮತ್ತೆ ನಂಬರ್ 1 ಸ್ಥಾನಕ್ಕೇರುವಲ್ಲಿ ಯಶಸ್ವುಯಾಗಿದ್ದರು. ಇದು ಅವರ 22ನೇ ಗ್ರ್ಯಾನ್‌ಸ್ಲ್ಯಾಮ್ ಆಗಿದ್ದು ಅತಿ ಹೆಚ್ಚು ಗ್ರ್ಯಾನ್‌ಸ್ಲ್ಯಾಮ್ ಗೆದ್ದ ರಾಫೆಲ್ ನಡಾಲ್ ಸಾಧನೆಯನ್ನು ಕೂಡ ಜೊಕೊವಿಕ್ ಹಿಂದಿಕ್ಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications