ಡೇವಿಸ್ ಕಪ್: ತನ್ನದೇ ದಾಖಲೆ ಉತ್ತಮಪಡಿಸಿದ ಲಿಯಾಂಡರ್ ಪೇಸ್

ನೂರ್ ಸುಲ್ತಾನ್, ನವೆಂಬರ್ 30: ಕಝಕೀಸ್ತಾನ್‌ನ ನೂರ್‌ಸುಲ್ತಾನ್‌ನಲ್ಲಿ ಶನಿವಾರ (ನವೆಂಬರ್ 30) ನಡೆದ ಡೇವಿಡ್ ಕಪ್ ಡಬಲ್ಸ್ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಮತ್ತು ಜೀವನ್ ನೆಡುಂಚೆಜಿಯಾನ್ ಜೋಡಿ, ಪಾಕಿಸ್ತಾನ ಜೋಡಿಯನ್ನು ಹಿಮ್ಮೆಟ್ಟಿಸಿದೆ.
ಡೇವಿಸ್ ಕಪ್‌ಗೆ ಪಾದಾರ್ಪಣೆ ಮಾಡಿದ್ದ ಜೀವನ್‌ಗೆ ಜೊತೆಯಾಗಿದ್ದ 46ರ ಹರೆಯದ ಪೇಸ್, ಎದುರಾಳಿ ಜೋಡಿಯನ್ನು 4-0ಯಿಂದ ಸೋಲಿಸಿದರು. ಇದರೊಂದಿಗೆ 2020ರ ಡೇವಿಸ್ ಕಪ್ ಕ್ವಾಲಿಫೈಯರ್‌ಗೆ ಭಾರತದ ಜೋಡಿ ಲಗ್ಗೆಯಿಟ್ಟಿದೆ. ಭಾರತದೆದುರು ಪಾಕಿಸ್ತಾನ ಜೋಡಿ ಮೊಹಮ್ಮದ್ ಶೋಯೆಬ್-ಹುಫೈಜಾ ಅಬ್ದುಲ್ ರೆಹಮಾನ್, 6-1, 6-3ರ ಅಂತರದಿಂದ ಸೋಲೊಪ್ಪಿಕೊಂಡಿತು.
ಕಳೆದ ವರ್ಷ ಡೇವಿಸ್ ಕಪ್ ಡಬಲ್ಸ್ ನಲ್ಲಿ ಚೀನಾ ಸೋಲಿಸಿ 43 ಪ್ರಶಸ್ತಿಗಳನ್ನು ಜಯಿಸಿದ್ದ ಪೇಸ್, ಇಟಲಿಯನ್ ಶ್ರೇಷ್ಠ ಆಟಗಾರ ನಿಕೋಲಾ ಪಿಯಟ್ರಂಗೇಲಿ ಹಿಂದಿಕ್ಕಿ ಡೇವಿಡ್ ಕಪ್ ಇತಿಹಾಸದಲ್ಲಿ ಡಬಲ್ಸ್‌ನಲ್ಲಿ ಅತೀ ಯಶಸ್ವಿ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಶನಿವಾರದ ಗೆಲುವಿನೊಂದಿಗೆ ಯಶಸ್ಸಿನ ಸಂಖ್ಯೆ 44ಕ್ಕೆ ಏರಿದೆ. ಅಂದರೆ ತನ್ನದೇ ದಾಖಲೆಯನ್ನು ಪೇಸ್ ಉತ್ತಮಪಡಿಸಿಕೊಂಡಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications