ಬೆರ್ಟೆನ್ಸ್ ಸೋಲಿಸಿದ ಕ್ವಿಟೋವಾಗೆ 3ನೇ ಮ್ಯಾಡ್ರಿಡ್ ಓಪನ್ ಪ್ರಶಸ್ತಿ

ಮ್ಯಾಡ್ರಿಡ್, ಮೇ 13: ವಿಶ್ವ ನಂ. 10ನೇ ಆಟಗಾರ್ತಿ ಜೆಕ್ ನ ಪೆಟ್ರಾ ಕ್ವಿಟೋವಾ ಅವರು ಮೂರನೇ ಬಾರಿಗೆ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಶನಿವಾರ ನಡೆದ ಮ್ಯಾಡ್ರಿಡ್ ಓಪನ್ ಫೈನಲ್ ಸ್ಪರ್ಧೆಯಲ್ಲಿಅವರು ನೆದರ್ಲ್ಯಾಂಡ್ ನ ಕಿಕಿ ಬರ್ಟೆನ್ಸ್ ವಿರುದ್ಧ 7-6, (8/6), 4-6, 6-3ರ ದೀರ್ಘ ಕಾದಾಟದಲ್ಲಿ ಗೆಲುವಿನ ನಗು ಬೀರಿದರು.
ಕ್ವಿಟೋವಾ 2011 ಮತ್ತು 2015ರಲ್ಲೂ ಮ್ಯಾಡ್ರಿಡ್ ಚಾಂಪಿಯನ್ ಎನಿಸಿಕೊಂಡಿದ್ದರು. 2018ರ ಈ ಸಾಲಿನಲ್ಲಿ ಸೇಂಟ್ ಪೀಟರ್ ಬರ್ಗ್, ದೋಹಾ ಮತ್ತು ಕಳೆದವಾರ ಪ್ರೇಗ್ ನಲ್ಲೂ ಟೆನಿಸ್ ಚಾಂಪಿಯನ್ ಶಿಪ್ ಜಯಿಸಿರುವ ಅವರಿಗೆ ಇದು ಮೂರನೇ ಮ್ಯಾಡ್ರಿಡ್ ಓಪನ್ ಪ್ರಶಸ್ತಿಯಾಗಿದೆ.
ಶ್ರೇಯಾಂಕಿತವಲ್ಲದ ಬೆರ್ಟೆನ್ಸ್ ಮತ್ತು ಕ್ವಿಟೋವಾ ನಡುವೆ ಸುಮಾರು 51 ನಿಮಿಷಗಳ ಕಾದಾಟ ನಡೆಯಿತು. ಹಿಂದಿನ ಪಂದ್ಯಗಳಲ್ಲಿ ಮಾಜಿ ವಿಶ್ವ ನಂ. 1 ಆಟಗಾರ್ತಿ ಮರಿಯಾ ಶರಪೋವಾ ಮತ್ತು ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು ಸೋಲಿಸಿ ಬೆರ್ಟೆನ್ಸ್ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದರು.
ಬೆರ್ಟೆನ್ಸ್ ಎದುರಿನ ಕೊಂಚ ಪ್ರಾಯಾಸಕರವಾದ ಮತ್ತು ಸವಾಲಿನ ಈ ಪಂದ್ಯದಲ್ಲಿ ಪ್ರಶಸ್ತಿ ಜಯಸಿದ ಬಳಿಕ ಕ್ವಿಟೋವಾ ವೃತ್ತಿ ಜೀವನದಲ್ಲಿ ಒಟ್ಟು 24 ಚಾಂಪಿಯನ್ ಶಿಪ್ ಗಳನ್ನು ಗೆದ್ದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications