For Quick Alerts
ALLOW NOTIFICATIONS  
For Daily Alerts

ಸುದ್ದಿಗೋಷ್ಠಿ ವೇಳೆ ಗಾಯ, ಫ್ರೆಂಚ್‌ ಓಪನ್‌ನಿಂದ ಹೊರ ನಡೆದ ಕ್ವಿಟೋವಾ

Petra Kvitova pulls out of French Open after injuring ankle

ಪ್ಯಾರಿಸ್: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಭಾನುವಾರ ನಡೆದ ಸುದ್ದಿಗೋಷ್ಠಿ ವೇಳೆ ಕ್ವಿಟೋವಾ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಫ್ರೆಂಚ್ ಓವನ್‌ನಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಕ್ವಿಟೋವಾ ತಿಳಿಸಿದ್ದಾರೆ.

ಮೇ 30ರ ಭಾನುವಾರ ಝೆಕ್ ರಿಪಬ್ಲಿಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ, ಸುದ್ದಿಗೋಷ್ಠಿ ವೇಳೆ ಆಯತಪ್ಪಿ ಬಿದ್ದು ಕಾಲಿನ ಮಣಿಕಟ್ಟಿನ ಭಾಗದಲ್ಲಿ ಗಾಯ ಮಾಡಿಕೊಂಡಿದ್ದರು. 31ರ ಹರೆಯದ ಕ್ವಿಟೋವಾ ಆರಂಭಿಕ ಸುತ್ತಿನಲ್ಲಿ ಬೆಲ್ಗಿಯನ್ ಕ್ವಾಲಿಫೈಯರ್ ಗ್ರೀಟ್ ಮಿನೆನ್ ವಿರುದ್ಧ 6-7(3) 7-6(5) 6-1ರ ಗೆಲುವು ಕಂಡಿದ್ದರು.

ಆರಂಭಿಕ ಸುತ್ತಿನ ಪಂದ್ಯದಲ್ಲಿ ಗೆದ್ದ ಬಳಿಕ ಸುದ್ದಿಗೋಷ್ಠಿ ನಡೆಸುವಾಗ ಕ್ವಿಟೋವಾ ಗಾಯಕ್ಕೀಡಾಗಿದ್ದರು. ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯುತ್ತಿರುವ ಸಂಗತಿಯನ್ನು ಕ್ವಿಟೋವಾ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

'ಗಾಯದ ಎಂಆರ್‌ಐ ಸ್ಕ್ಯಾನ್ ಮತ್ತು ನನ್ನ ತಂಡದೊಂದಿಗಿನ ಚರ್ಚೆಯ ಬಳಿಕ ನಾನು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಫ್ರೆಂಚ್ ಓಪನ್ ಇನ್ನುಳಿದ ಪಂದ್ಯಗಳಲ್ಲಿ ತಾನು ಆಡುತ್ತಿಲ್ಲ,' ಎಂದು ಕ್ವಿಟೋವಾ ತಿಳಿಸಿದ್ದಾರೆ. ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ಎರಡನೇ ಪ್ರಮುಖ ಆಟಗಾರ್ತಿ ಕ್ವಿಟೋವಾ. ವಿಶ್ವ ನಂ.2 ಆಟಗಾರ್ತಿ, ಜಪಾನ್‌ನ ನವೋಮಿ ಒಸಾಕ ಕೂಡ ಟೂರ್ನಿಯಿಂದ ಈ ಮೊದಲೇ ಹೊರ ನಡೆದಿದ್ದಾರೆ.

Story first published: Wednesday, June 2, 2021, 13:04 [IST]
Other articles published on Jun 2, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+