Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆನಿಸ್‌: ಸ್ಟಟ್‌ಗಾರ್ಟ್‌ ಚಾಂಪಿಯನ್‌ ಕ್ವಿಟೋವಾಗೆ ವಿಶ್ವದ 2ನೇ ಶ್ರೇಯಾಂಕ

Petra Kvitova usurps Simona Halep, snatches World No. 2 spot

ಪ್ಯಾರಿಸ್‌, ಏಪ್ರಿಲ್‌ 29: ಜೆಕ್‌ ಗಣರಾಜ್ಯದ ಅನುಭವಿ ಆಟಗಾರ್ತಿ ಪೆಟ್ರಾ ಕ್ವಿಟೋವಾ, ಡಬ್ಲ್ಯುಟಿಎ ಸೋಮವಾರ ಬಿಡುಗಡೆ ಮಾಡಿರುವ ನೂತನ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ರೊಮೇನಿಯಾದ ಸಿಮೋನಾ ಹ್ಯಾಲೆಪ್‌ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.

29 ವರ್ಷದ ಎಡಗೈ ಆಟಗಾರ್ತಿ ಕ್ವಿಟೋವಾ, ಭಾನುವಾರ ಮುಕ್ತಾಯಗೊಂಡ ಸ್ಟಟ್‌ಗಾರ್ಟ್‌ ಓಪನ್‌ ಟೆನಿಸ್‌ ಟೂರ್ನಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿ ವಿಶ್ವ ಶ್ರೇಯಾಂಕದಲ್ಲೂ ಏಳಿಗೆ ಕಂಡಿದ್ದಾರೆ. ಜಪಾನ್‌ನ ತಾರೆ ನವೋಮಿ ಒಸಾಕ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅನುಭವ ಮೆರೆದ ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಕ್ವಿಟೋವಾ 6-3, 7-6 (7/2) ಅಂತರದ ನೇರ ಸೆಟ್‌ಗಳಿಂದ ಎಸ್ಟೋನಿಯಾದ 23 ವರ್ಷದ ಯುವ ಆಟಗಾರ್ತಿ ಅನೆಟ್‌ ಕೊಂಟಾವಿಯೆಟ್‌ ಅವರನ್ನು ಬಗ್ಗುಬಡಿದು ವೃತ್ತಿ ಬದುಕಿನ 27ನೇ ಡಬ್ಲ್ಯುಟಿಎ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಡಬ್ಲ್ಯುಟಿಎ ಪ್ರಕಟಿಸಿರುವ ನೂತನ ವಿಶ್ವ ಶ್ರೇಯಾಂಕದ ಟಾಪ್‌ 5 ಆಟಗಾರ್ತಿಯರ ಪಟ್ಟಿ

1. ನವೋಮಿ ಒಸಾಕ (ಜಪಾನ್‌), 6151 (ಅಂಕಗಳು)
2. ಪೆಟ್ರಾ ಕ್ವಿಟೋವಾ (ಜೆಕ್‌ ಗಣರಾಜ್ಯ), 6015 (ಅಂಕಗಳು)
3. ಸಿಮೋನಾ ಹ್ಯಾಲೆಪ್‌ (ರೊಮೇನಿಯಾ), 5682 (ಅಂಕಗಳು)
4. ಏಂಜಲಿಕ್‌ ಕೆರ್ಬರ್‌ (ಜರ್ಮನಿ), 5220 (ಅಂಕಗಳು)
5. ಕ್ಯಾರೊಲಿನಾ ಪ್ಲಿಸ್ಕೊವಾ (ಜೆಕ್‌ ಗಣರಾಜ್ಯ),5111 (ಅಂಕಗಳು)

Story first published: Monday, April 29, 2019, 17:03 [IST]
Other articles published on Apr 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+