ಸಾನಿಯಾ ಗುಣಗಾನ: ಮೋದಿ, ಪ್ರಣಬ್, ಶಾರುಖ್ ಟ್ವೀಟ್
ಬೆಂಗಳೂರು, ಜುಲೈ 12: ಭಾರತದ ಹೆಮ್ಮೆಯ ಪುತ್ರಿ ಸಾನಿಯಾ ಮಿರ್ಜಾ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವುದಕ್ಕೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಫರಾನ್ ಅಖ್ತರ್ ಸೇರಿದಂತೆ ಸಾರ್ವಜನಿಕರು ಕೂಡಾ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ವಿಂಬಲ್ಡನ್ ಗೆದ್ದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, ಬಹುದಿನಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಈ ಒಂದು ಕ್ಷಣಕ್ಕಾಗಿ ಹಲವು ವರ್ಷದಿಂದ ಕಾದಿದ್ದೆ. ನನ್ನ ಗೆಲುವು ಭಾರತದ ಯುವ ಪ್ರತಿಭೆಗಳಿಗೆ ಹುಡುಗಿಯರಿಗೆ ಸ್ಫೂರ್ತಿಯಾಗುತ್ತದೆ ಎಂಬ ಭಾವನೆ ಇದೆ ಎಂದು ಭಾನುವಾರ ಹೇಳಿದರು.[ಸಾನಿಯಾ ಮಿರ್ಜಾ- ಹಿಂಗಿಸ್ ಗೆ ವಿಂಬಲ್ಡನ್ ಗರಿ]
ಶನಿವಾರ ಸೆಂಟರ್ ಕೋರ್ಟಿನಲ್ಲ್ಲಿ ನಡೆದ ವಿಂಬಲ್ಡನ್ ಮಹಿಳೆಯರ ಡಬಲ್ಸ್ ಅಂತಿಮ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ ಹಾಗೂ ಹಿಂಗಿಸ್ ಜೋಡಿ, ರಷ್ಯಾದ ಜೋಡಿಯಾದ ಎಕಾಟೆರಿನಾ ಮಕರೋವಾ-ಎಲೇನಾ ವೆಸ್ನಿನಾ ವಿರುದ್ಧ 5-7, 7-6 (7/4), 7-5 ಅಂತರದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾನಿಯಾ ಸುದ್ದಿಗೋಷ್ಠಿ ವಿವರ ಹಾಗೂ ಆಕೆಯ ಸಾಧನೆ ಬಗ್ಗೆ ಬಂದಿರುವ ಮೆಚ್ಚುಗೆ ಮಾತುಗಳನ್ನು ಮುಂದೆ ಓದಿ...

ಮೊದಲ ವಿಂಬಲ್ಡನ್ ಗೆದ್ದ ಖುಷಿಯಲ್ಲಿ
28 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ ಅವರು ವಿಂಬಲ್ಡನ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮುಂಚೆ ಮಹೇಶ್ ಭೂಪತಿ ಜೊತೆ ಸೇರಿ 2009ರಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಗೆದ್ದಿದ್ದರು. ನಂತರ ಭೂಪತಿ ಜೊತೆ 2012ರಲ್ಲಿ ಫ್ರೆಂಚ್ ಓಪನ್ ಹಾಗೂ ಬ್ರೂನೋ ಸೊರೆಸ್ ಜೊತೆಗೂಡಿ 2014ರಲ್ಲಿ ಯುಎಸ್ ಓಪನ್ ಗೆದ್ದಿದ್ದಾರೆ.

ಕನಸು ನನಸಾಯಿತು : ಸಾನಿಯಾ
ಪ್ರತಿಯೊಂದು ಮಕ್ಕಳಿಗೂ ಒಂದು ಕನಸು ಇದ್ದ ಹಾಗೆ ನಾವು ಸಹ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಹಲವು ವರ್ಷಗಳಿಂದಲೂ ಕನಸು ಕಂಡಿದ್ದೆವು. ಆ ಕನಸು ನಿನ್ನೆ ನನಸಾಯಿತು. ಪ್ರಶಸ್ತಿ ಗೆದ್ದದ್ದು ಬಹಳ ಸಂತಸ ತಂದಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಮೆಚ್ಚುಗೆಯ ಮಾತುಗಳು.
ಪ್ರಧಾನಿ ಮೋದಿ ಅವರಿಂದ ಟ್ವೀಟ್
ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ನಾವು ನಿಮ್ಮ ಸಾಧನೆಗೆ ಹೆಮ್ಮೆಪಡುತ್ತೇವೆ. ತುಂಬಾ ಸಂತಸ ತಂದಿದೆ ಎಂದಿದ್ದಾರೆ.
ರೋಜರ್ ಫೆಡರರ್ ರಿಂದಲೂ ಟ್ವೀಟ್
ವಿಂಬಲ್ಡನ್ ಫೈನಲ್ ಗೆ ತಯಾರಿ ನಡೆಸುತ್ತಿರುವ ರೋಜರ್ ಫೆಡರರ್ ರಿಂದಲೂ ಟ್ವೀಟ್
ಗೆಲುವಿನ ಹಾದಿಯ ಬಗ್ಗೆ ಸಾನಿಯಾ
ಗೆಲುವಿನ ಹಾದಿ, ಗುರಿ ಮುಟ್ಟಿದ ಸಂತಸದ ಬಗ್ಗೆ ಸಾನಿಯಾ ಸರಣಿ ಟ್ವೀಟ್ ಮಾಡಿದ್ದಾರೆ.
ಕಿಂಗ್ ಖಾನ್ ಶಾರುಖ್ ಟ್ವೀಟ್
ಕಿಂಗ್ ಖಾನ್ ಶಾರುಖ್ ಟ್ವೀಟ್ ಮಾಡಿ ಸಾನಿಯಾ ಹಾಗೂ ಹಿಂಗಿಸ್ ಜೋಡಿ ಉತ್ತಮ ಆಟವಾಡಿದ್ದೀರಿ ಎಂದು ಪ್ರಶಂಸಿಸಿದ್ದಾರೆ.
ಅಭಿಷೇಕ್ ಬಚ್ಚನ್ ಅವರಿಂದ ಟ್ವೀಟ್
ಕ್ರೀಡಾಪ್ರೇಮಿ ನಟ ಅಭಿಷೇಕ್ ಬಚ್ಚನ್ ಅವರು ಟ್ವೀಟ್ ಮಾಡಿ ಸಾನಿಯಾ ಹಾಗೂ ಮಾರ್ಟಿನಾಗೆ ಶುಭ ಹಾರೈಸಿದ್ದಾರೆ.
ಲೈವ್ ಮ್ಯಾಚ್ ನೋಡಿದ ಖುಷಿಯಲ್ಲಿ ಫರ್ಹಾನ್
ಲೈವ್ ಮ್ಯಾಚ್ ನೋಡಿದ ಖುಷಿಯಲ್ಲಿ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿದ್ದು ಹೀಗೆ...
ರೂಪ ಸುಬ್ರಮಣ್ಯ ತಗಾದೆಗೆ ಟ್ವೀಟ್ ಪೆಟ್ಟು
ಅಂಕಣಗಾರ್ತಿ ರೂಪ ಸುಬ್ರಮಣ್ಯ ತಗಾದೆಗೆ ಇತರರಿಂದ ಟ್ವೀಟ್ ಪೆಟ್ಟು
ಚೇತನ್ ಭಗತ್ ಗೆ ಮತ್ತೆ ತಿವಿತ
ಚೇತನ್ ಭಗತ್ ಗೆ ಮತ್ತೆ ಟ್ವೀಟ್ ಮಾಡಿ ತಿವಿದ ಮಂದಿ, ಷೇಕ್ಸ್ ಪಿಯರ್ ಏನಪ್ಪಾ ನಿನ್ನ ಇಂಗ್ಲೀಷ್ ಎಂದು ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications