For Quick Alerts
ALLOW NOTIFICATIONS  
For Daily Alerts

ಕತಾರ್ ಓಪನ್: ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯವಾದ ರೋಜರ್ ಫೆಡರರ್ ಹೋರಾಟ

Qatar Open: Roger Federer loses to Nikoloz Basilashvili in second match

ಸುದೀರ್ಘ ಕಾಲದ ನಂತರ ಮತ್ತೆ ಟೆನ್ನಿಸ್ ಅಂಗಳಕ್ಕೆ ಇಳಿದಿದ್ದ ರೋಜರ್ ಫೆಡರರ್ ಹೋರಾಟ ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯವಾಗಿದೆ. ಕತಾರ್ ಓಪನ್‌ನ ಕ್ವಾರ್ಟರ್‌ಫೈನಲ್ ಸೆಣೆಸಾಟದಲ್ಲಿ ರೋಜರ್ ಫೆಡರರ್ ಜಾರ್ಜಿಯಾದ ನಿಕೋಲಸ್ ಬಸಿಲಾಶ್ವಿಲಿಗೆ ಶರಣಾಗಿದ್ದಾರೆ. 6-3, 1-6, 5-7 ಅಂತರದಿಂದ ಫೆಡರರ್ ಸೋಲು ಕಂಡಿದ್ದಾರೆ.

ಈ ಇಬ್ಬರು ಟಿನ್ನಿಸಿಗರು ಈ ಹಿಂದೆ 2016ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮುಖಾಮುಖಿಯಾಗಿದ್ದರು. ಆಗ ಫೆಡರರ್ ಎದುರಾಳಿ ನಿಕೋಲಸ್ ಅವರನ್ನು 6-2, 6-1, 6-2ರ ಅಂತರದಿಂದ ಅತ್ಯಂತ ಸುಲಭವಾಗಿ ಮಣಿಸಿದ್ದರು.

ಇನ್ನು ಗುರುವಾರ ರಾತ್ರಿ ನಡೆದ ಈ ಕುತೂಹಲಕಾರಿ ಪಂದ್ಯದಲ್ಲಿ ರೋಜರ್ ಫೆಡರರ್ ಮೊದಲ ಸುತ್ತನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಬಳಿಕ ಅದ್ಭುತ ಹೋರಾಟದ ಮೂಲಕ ಜಾರ್ಜಿಯಾದ ಆಟಗಾರ ತಿರುಗೇಟಿ ನೀಡಿದ್ದರು. ಈ ರೋಚಕ ಹೋರಾಟ ಒಂದು ಗಂಟೆ ಐವತ್ತು ನಿಮಿಷಗಳ ಕಾಲ ನಡೆಯಿತು.

2020ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಬಳಿಕ ರೋಜರ್ ಫೆಡರರ್ ಪಾಲ್ಗೊಂಡ ಮೊದಲ ಟೂರ್ನಮೆಂಟ್ ಇದಾಗಿದೆ. ಕಳೆದ ವರ್ಷ ಫೆಡರರ್ ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರು ಸುದೀರ್ಘ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು.

ಇನ್ನು ಈ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಫೆಡರರ್ ಡೇನಿಯಲ್ ಇವಾನ್ಸ್ ವಿರುದ್ಧ ಸೆಣೆಸಾಡಿ 7-6 (10-8), 3-6, 7-5 ಅಂತರದಿಂದ ಗೆದ್ದು ಬೀಗಿದ್ದರು. ಮತ್ತೊಂದೆಡೆ ನಿಕೋಲಸ್ ಬಸಿಲಾಶ್ವಿಲಿ 2019ರ ಬಳಿಕ ಇದೇ ಮೊದಲ ಬಾರಿಗೆ ಸತತ ಮೂರು ಟೂರ್ ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.

Story first published: Friday, March 12, 2021, 0:35 [IST]
Other articles published on Mar 12, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+