Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್: ಫೈನಲ್ ನಲ್ಲಿ ನಡಾಲ್-ಥೀಮ್ ಮುಖಾಮುಖಿ

Rafael Nadal eyes 11th French Open title as clock ticks

ಪ್ಯಾರೀಸ್, ಜೂ. 9: ಶುಕ್ರವಾರ ನಡೆದ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) ಪುರುಷರ ಸಿಂಗಲ್ಸ್ ನ ಸೆಮಿಫೈನಲ್ ಸ್ಪರ್ಧೆಯಲ್ಲಿ ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ. ಈ ಮುನ್ನಡೆಯೊಂದಿಗೆ ನಡಾಲ್ 11ನೇ ಫ್ರೆಂಚ್ ಓಪನ್ ಜಯಿಸುವುದರತ್ತ ದೃಷ್ಟಿ ನೆಟ್ಟಿದ್ದಾರೆ.

ಸ್ಪೇನ್ ನ ಸ್ಟಾರ್ ಆಟಗಾರ ನಡಾಲ್ ಶುಕ್ರವಾರದ ಸೆಮಿ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು 6-4, 6-1, 6-2 ಅಂತರದಿಂದ ಮಣಿಸಿದರು. ಸದ್ಯ ಟೆನಿಸ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ನಡಾಲ್ ಫೈನಲ್ ನಲ್ಲೂ ಗೆಲುವು ಸಾಧಿಸುವ ನಿರೀಕ್ಷೆಯಿದೆ.

10 ಬಾರಿ ಫ್ರೆಂಚ್ ಓಪನ್ ಗೆದ್ದಿರುವ ನಡಾಲ್ ವಿರುದ್ಧ ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರು ಸ್ಪರ್ಧಿಸಲಿದ್ದಾರೆ. ಶುಕ್ರವಾರ ನಡೆದ ಇನ್ನೊಂದು ಸ್ಪರ್ಧೆಯಲ್ಲಿ ಥೀಮ್ ಅವರು ಇಟಲಿಯ ಮಾರ್ಕೊ ಸೆಚ್ಚಿನಾಟೊ ವಿರುದ್ಧ ಗೆದ್ದು ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದರು.

ಥೀಮ್ ಅವರು ಸೆಚ್ಚಿನಾಟೊ ವಿರುದ್ಧ 7-5, 7-6, 6-1ರ ಗೆಲುವು ಸಾಧಿಸಿದ್ದರು. ಅಂತೂ ಭಾನುವಾರ ಟೆನಿಸ್ ಅಗ್ರ ಕ್ರಮಾಂಕದ ಬಲಿಷ್ಟ ಆಟಗಾರ ನಡಾಲ್ ಮತ್ತು 8ನೇ ಶ್ರೇಯಾಂಕಿತ ಥೀಮ್ ನಡುವೆ ಪೈಪೋಟಿ ನಡೆಯಲಿದೆ. ಗೆಲ್ಲುವ ನೆಚ್ಚಿನ ಆಟಗಾರನಾಗಿ ನಡಾಲ್ ಕಾಣಿಸುತ್ತಿದ್ದಾರಾದರೂ ಟೆನಿಸ್ ನಲ್ಲಿ ನಿರೀಕ್ಷೆ ಸುಳ್ಳಾಗಿ ಅಚ್ಚಿರಿಯ ಫಲಿತಾಂಶ ಬಂದಿರುವ ಸಾಕಷ್ಟು ಉದಾಹರಣೆಗಳಿರುವುದರಿಂದ ನಾಳಿನ ಪಂದ್ಯ ಕುತೂಹಲ ಮೂಡಿಸಿದೆ.

ಜೂನ್ 9ರ ಶನಿವಾರ ವನಿತಾ ಸಿಂಗಲ್ಸ್ ಫೈನಲ್ ಸ್ಪರ್ಧೆ ನಡೆಯಲಿದ್ದು, ರುಮೇನಿಯಾದ ಸಿಮೊನಾ ಹಲೆಪ್ ಮತ್ತು ಅಮೆರಿಕದ ಸ್ಲೊವಾನ್ ಸ್ಟೀಫನ್ಸ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

Story first published: Saturday, June 9, 2018, 15:45 [IST]
Other articles published on Jun 9, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+