ರಿಯೋ : ಸೆಮಿಫೈನಲ್ ತಲುಪಿದ ಸಾನಿಯಾ-ಬೋಪಣ್ಣ ಜೋಡಿ
ರಿಯೋ ಡಿ ಜನೈರೋ, ಆಗಸ್ಟ್ 13: ರಿಯೋ ಒಲಿಂಪಿಕ್ಸ್ 2016 ರ ಟೆನ್ನಿಸ್ ಪಂದ್ಯಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಆಸೆ ಚಿಗುರೊಡೆದಿದೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೆಮಿ ಫೈನಲ್ ತಲುಪಿದೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಕ್ವಾರ್ಟರ್ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ನ ಆಂಡಿ ಮರ್ರೆ ಹಾಗೂ ಹಿದರ್ ವಾಟ್ಸನ್ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿ ಸೆಮಿಫೈನಲ್ ಹಂತ ತಲುಪಿದ್ದಾರೆ. ಸೆಮಿಫೈನಲ್ ನಲ್ಲಿ ಗೆದ್ದರೆ ಪದಕ ಖಚಿತವಾಗಲಿದೆ.

ಒಲಿಂಪಿಕ್ಸ್ ಟೆನಿಸ್ ಸೆಂಟರ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸಾನಿಯಾ -ಬೋಪಣ್ಣ ಅವರು 6-4, 6-4ರಲ್ಲಿ ಸುಲಭ ಜಯ ದಾಖಲಿಸಿದರು. [36 ವರ್ಷಗಳ ಬಳಿಕ ಹಾಕಿ ಇಂಡಿಯಾದ ಸಾಧನೆ]
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಸ್ಯಾಮ್ ಸ್ಟೊಸುರ್ ಹಾಗೂ ಜೋನಾಥನ್ ಪೀರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೋಪಣ್ಣ -ಸಾನಿಯಾ ಜೋಡಿ ಸುಲಭ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದರು.
ಬಾಕ್ಸಿಂಗ್ : ಭಾರತದ ವಿಕಾಸ್ ಕೃಷ್ಣನ್ ಅವರು 74 ಕೆಜಿ ವಿಭಾಗದ ಮಿಡ್ಲ್ ವೇಯ್ಟ್ ಬಾಕ್ಸಿಂಗ್ ನಲ್ಲಿ ಟರ್ಕಿಯ ಸಿಪಾಲ್ ಓಂಡರ್ ವಿರುದ್ಧ 3-0 ಅಂತರದಲ್ಲಿ ಸುಲಭ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಉಜ್ಬೇಕಿಸ್ತಾನದ ಬೆಕ್ತೆಮಿರ್ ಮಿಲಿಕುಜಿವ್ ಅವರನ್ನು ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications