ಸೆಮೀಸ್ ನಲ್ಲಿ ಸೋಲು: ಕಂಚಿನ ಪದಕಕ್ಕಾಗಿ ಸಾನಿಯಾ-ಬೋಪಣ್ಣ ಫೈಟ್
ರಿಯೋ ಡಿ ಜನೈರೋ, ಆಗಸ್ಟ್ 14: ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಶನಿವಾರ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಅಮೆರಿಕದ ವೀನಸ್ ವಿಲಿಯಮ್ಸ್ ಹಾಗೂ ರಾಜೀವ್ ರಾಮ್ ಜೋಡಿಗೆ ಶರಣಾಗಿದೆ. ಈಗ ಭಾರತದ ಜೋಡಿ ಚಿನ್ನ, ಬೆಳ್ಳಿ ಆಸೆ ಬಿಟ್ಟು, ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಿದೆ. [ರಿಯೋ ಅಥ್ಲೆಟಿಕ್ಸ್: ಮೊದಲ ದಿನ ಭಾರತದ ಸಾಧನೆ ಶೂನ್ಯ]

ರಿಯೋ ಒಲಿಂಪಿಕ್ಸ್ 2016 ರ ಟೆನ್ನಿಸ್ ಪಂದ್ಯಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಆಸೆ ಚಿಗುರೊಡೆಯುವಂತೆ ಮಾಡಿದ್ದ ಸಾನಿಯಾ ಹಾಗೂ ರೋಹನ್ ಬೋಪಣ್ಣ ಅವರು ಸೆಮಿಫೈನಲ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದರೂ ಪಂದ್ಯವನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾದರು.[ರಿಯೋ ಜಿಮ್ನಾಸ್ಟಿಕ್ : ದೀಪಾ ಕರ್ಮಾಕರ್ ಫೈನಲಿಗೆ ಜೈ ಹೋ!]
ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ 6-2,2-6,3-10 ಅಂತರದಲ್ಲಿ ಅಮೆರಿಕ ಜೋಡಿ ಸೋಲಿಸಿತು. ಎರಡು ಸೆಟ್ ಗಳು ಸಮನಾದ ಮೇಲೆ ಟೈ ಬ್ರೇಕರ್ ನಲ್ಲಿ ಅಮೆರಿಕ ಜೋಡಿ ಉತ್ತಮ ಆಟ ಪ್ರದರ್ಶಿಸಿ, ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಕ್ವಾರ್ಟರ್ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ನ ಆಂಡಿ ಮರ್ರೆ ಹಾಗೂ ಹಿದರ್ ವಾಟ್ಸನ್ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿ ಸೆಮಿಫೈನಲ್ ಹಂತ ತಲುಪಿದ್ದರು. ಈಗ ಇನ್ನೊಂದು ಪಂದ್ಯ ಗೆದ್ದರೆ ಕಂಚಿನ ಪದಕ ಖಚಿತವಾಗಲಿದೆ.
ಭಾರತಕ್ಕೆ ಒಲಿಂಪಿಕ್ಸ್ ಟೆನಿಸ್ ಸಿಂಗಲ್ಸ್ ನಲ್ಲಿ ಇಲ್ಲಿತನಕ ಒಂದು ಪದಕ ಸಿಕ್ಕಿದೆ. 1996ರ ಅಟ್ಲಾಂಟ ಗೇಮ್ಸ್ ನಲ್ಲಿ ಲಿಯಾಂಡರ್ ಪೇಸ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications