ಟೆಸ್ಟ್ ಕ್ರಿಕೆಟ್ ನಂ. 1 ಶ್ರೇಯಾಂಕ ಸಚಿನ್ ಬದಲಿಗೆ ಫೆಡರರ್!

ಬೆಂಗಳೂರು, ಜುಲೈ 10: ವಿಶ್ವದ ನಂ 2 ಶ್ರೇಯಾಂಕಿತ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರಿಗೆ ಟೆಸ್ಟ್ ಕ್ರಿಕೆಟ್ ನ ಅಗ್ರ ಶ್ರೇಯಾಂಕ ಬಿರುದು ನೀಡಲಾಗಿದೆ. ಅರೇ! ಇದು ಹೇಗೆ ಸಾಧ್ಯ ಎನಿಸಬಹುದು.
ಆದರೆ, ವಿಂಬಲ್ಡನ್ನ 4ನೇ ಸುತ್ತಿನ 16ನೇ ಪಂದ್ಯದಲ್ಲಿ ಎದುರಾಳಿ ಅಡ್ರಿಯಾನ್ ಮನ್ನಾರಿನೋ ಅವರನ್ನ 6-0, 7-5, 6-4 ಸೆಟ್ಗಳಿಂದ ಮಣಿಸಿದರು. ಈ ಪಂದ್ಯದಲ್ಲಿ ಟೆನಿಸ್ ಚೆಂಡನ್ನು ಫೆಡರರ್ ಅಡಿದ ರೀತಿ ಈಗ ವೈರಲ್ ಆಗಿದೆ.
ಫೆಡರರ್ ಅವರು ಕ್ರಿಕೆಟ್ ಫಾರ್ವಡ್ ಡಿಫೆನ್ಸ್ ರೀತಿಯಲ್ಲಿ ಚೆಂಡನ್ನು ಎದುರಿಸಿದಂತೆ ಕಾಣುತ್ತದೆ. ಈ ದೃಶ್ಯವನ್ನು ಸೆರೆ ಹಿಡಿದು ವಿಂಬಲ್ಡನ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ, ಹೇಗಿದೆ ಈ ಆಟ, ಏನು ರೇಟಿಂಗ್ ಕೊಡುತ್ತೀರಿ? ಎಂದು ಐಸಿಸಿಗೆ ಟ್ಯಾಗ್ ಮಾಡಲಾಗಿದೆ.
ಇದಕ್ಕೆ ಉತ್ತರಿಸಿದ ಐಸಿಸಿ, ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್ಮನ್ ಎಂದು ಟ್ವೀಟ್ ಮಾಡಿದೆ. ಇದರ ಜತೆಗೆ ರೋಜರ್ ಫೆಡರರ್ ಹೊಡೆತವನ್ನ ಸಚಿನ್ ತೆಂಡೂಲ್ಕರ್ ಡಿಫೆನ್ಸಿವ್ ಶಾಟ್ಗೆ ಹೋಲಿಕೆ ಮಾಡಲಾಗಲಾಗಿದೆ.
ಯಾರು ಶ್ರೇಷ್ಠರು ಎಂಬ ಚರ್ಚೆ ನಡೆದಿದೆ. ಇದಲ್ಲದೆ, ಇಬ್ಬರು ದಿಗ್ಗಜರು ಸ್ಪೈಡರ್ ಮ್ಯಾನ್ ವೇಷ ತೊಟ್ಟು ಮುಖವಾಡ ಕಳಚಿ ನಿಂತ ಹಾಸ್ಯದ ಚಿತ್ರ ಟ್ವೀಟ್ ಮಾಡಲಾಗಿದೆ.
ಇದೆಲ್ಲವನ್ನು ಗಮಿಸಿರುವ ಸಚಿನ್, ಟ್ವೀಟ್ ಮಾಡಿ, ವಿಂಬಲ್ಡನ್ ಗೆದ್ದು ಬನ್ನಿ, ಒಟ್ಟಿಗೆ ಎರಡು ಆಟಗಳ ಸಂಭ್ರಮಾಚರಣೆಯಲ್ಲಿ ತೊಡಗೋಣ ಎಂದಿದ್ದಾರೆ.
Story first published: Tuesday, July 10, 2018, 18:06 [IST]
Other articles published on Jul 10, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications