ಕತಾರ್ ಓಪನ್ 2021: ಜಯದ ಹಾದಿಗೆ ಮರಳಿದ ರೋಜರ್ ಫೆಡರರ್

ದೋಹಾ: ಸ್ವಿಟ್ಜರ್ಲ್ಯಾಂಡ್ ದೈತ್ಯ ಟೆನಿಸ್ ಆಟಗಾರ ರೋಜರ್ ಫೆಡರರ್ ಮತ್ತೆ ಜಯದ ಹಾದಿಗೆ ಮರಳಿದ್ದಾರೆ. ಸುಮಾರು 405 ದಿನಗಳ ಕಾಲ ಸ್ಪರ್ಧೆಯಿಂದ ದೂರ ಉಳಿದಿದ್ದ ಫೆಡರರ್ ಈಗ ಕತಾರ್ ಓಪನ್‌ನಲ್ಲಿ ಆಡುತ್ತಿದ್ದು, ದ್ವಿತೀಯ ಸುತ್ತಿನ ಪಂದ್ಯದಲ್ಲಿ ಗೆಲುವು ಕಂಡಿದ್ದಾರೆ.
ಮೊಣಕಾಲಿಗೆ ಎರಡು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಕೊಂಡಿದ್ದ ರೋಜರ್ ಫೆಡರರ್ ಬಹಳಷ್ಟು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ದೋಹಾದಲ್ಲಿ ಬುಧವಾರ (ಮಾರ್ಚ್ 10) ನಡೆದ ಕತಾರ್ ಓಪನ್ ಟೆನಿಸ್ ಟೂರ್ನಿಯ ದ್ವಿತೀಯ ಸುತ್ತಿನಲ್ಲಿ ಬ್ರಿಟನ್‌ನ ನಂ.1 ಆಟಗಾರ ಡಾನ್ ಇವಾನ್ಸ್ ವಿರುದ್ಧ 7-6 (8), 3-6, 7-5ರ ಜಯ ದಾಖಲಿಸಿದ್ದಾರೆ.
ಸ್ಪರ್ಧಾ ಪಂದ್ಯಗಳಿಗೆ ಮರಳುವ ಮುನ್ನ ಆಸ್ಟ್ರೇಲಿಯನ್ ಓಪನ್ 2020 ರಲ್ಲಿ ಫೆಡರರ್ ಕಡೇಯ ಸಾರಿ ಆಡಿದ್ದರು. ಕಳೆದ ವರ್ಷ ಯುಎಸ್ ಓಪನ್ ಮತ್ತು ಫ್ರೆಂಚ್ ಓಪನ್ ನಲ್ಲೂ ಫೆಡರರ್ ಆಡದೆ ಟೂರ್ನಿಗಳಿಂದ ಹೊರಗುಳಿಯುವ ನಿರ್ಧಾರ ತಾಳಿದ್ದರು.
'ಸ್ಪರ್ಧೆಗೆ ಮರಳಿದ್ದಕ್ಕೆ ಖುಷಿಯಾಗಿದೆ. ಗೆದ್ದರೂ ಗೆಲ್ಲದಿದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ನಿಂತಿರುವುದಕ್ಕೆ ಖುಷಿಯಾಗಿದೆ. ಖಂಡಿತವಾಗಿಯೂ ಗೆಲುವು ಒಳ್ಳೆಯ ಖುಷಿ ನೀಡುತ್ತದೆ. ಇದೊಂದು ಒಳ್ಳೆಯ ಪಂದ್ಯವಾಗಿತ್ತು. ಡ್ಯಾನ್ ನಿಜಕ್ಕೂ ಚೆನ್ನಾಗಿ ಆಡಿದ್ದಾರೆ,' ಎಂದು ಪಂದ್ಯದ ಬಳಿಕ ಮಾತನಾಡಿದ ಫೆಡರರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications