ಮೂರು ವರ್ಷಗಳ ಬಳಿಕ ಕ್ಲೇ ಕೋರ್ಟ್ ಕಣಕ್ಕೆ ರೋಜರ್ ಫೆಡರರ್

ಮ್ಯಾಡ್ರಿಡ್, ಮೇ 06: ವಿಶ್ವದ ಮಾಜಿ ನಂ.1 ಆಟಗಾರ ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಮೂರು ವರ್ಷಗಳ ಸುದೀರ್ಘಾವಧಿಯ ಬಳಿಕ ಕ್ಲೇ ಕೋರ್ಟ್ ಟೂರ್ನಿಗಳಿಗೆ ಮರಳಲು ಸಜ್ಜಾಗಿದ್ದಾರೆ.
ವಿಶ್ವ ದಾಖಲೆಯ 20 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ 37 ವರ್ಷದ ಅನುಭವಿ ಆಟಗಾರ ರೋಜರ್ ಫೆಡರರ್, ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲಿದ್ದು ನಾಲ್ಕನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.
2016ರ ರೋಮ್ ಮಾಸ್ಟರ್ಸ್‌ನಲ್ಲಿ ಆಡಿದ ಬಳಿಕ ಕ್ಲೇ ಕೋರ್ಟ್ ಟೂರ್ನಿಗಳಿಮದ ಸಂಪೂರ್ಣ ದೂರ ಉಳಿದಿದ್ದ ರೋಜರ್ ಫೆಡರರ್, ಇದೀಗ ಮ್ಯಾಡ್ರಿಡ್ ಅಂಗಣದಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು ಎರಡನೇ ಸುತ್ತಿನಲ್ಲಿ ಅನುಭವಿ ಆಟಗಾರ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ಅಥವಾ ವೈಲ್ಡ್ ಕಾರ್ಡ್ ಆಟಗಾರ ಸ್ಪೇನ್‌ನ ಡಾವಿಡೊವಿಚ್ ಫೊಕಿನಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ಫೆಡರರ್ ನಿರೀಕ್ಷೆಯಂತೆ ಗೆಲುವು ದಾಖಲಿಸಿದರೆ ಕ್ವಾರ್ಟರ್ ಫೈನಲ್ಸ್‌ನಲ್ಲಿ ಹಾಲಿ ಬಾರ್ಸಿಲೋನಾ ಓಪನ್ ಚಾಂಪಿಯನ್ ಆಸ್ಟ್ರಿಯಾದ ಡಾಮಿನಿಕ್ ಥೀಮ್, ಸೆಮಿಫೈನಲ್ಸ್‌ನಲ್ಲಿ ವಿಶ್ವದ ಹಾಲಿ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ಫೈನಲ್‌ನಲ್ಲಿ ಕ್ಲೇ ಕಿಂಗ್ ಹಾಗೂ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ರಾಫೆಲ್ ನಡಾಲ್ ಅವರ ಸವಾಲನ್ನು ಎದುರಿಸುವ ಸಾಧ್ಯತೆ ಇದೆ.
"ಕಳೆದ ಡಿಸೆಂಬರ್‌ನಲ್ಲೇ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಂತಸವಿದೆ. ಕ್ಲೇ ಕೋರ್ಟ್‌ನಲ್ಲಿ ಆಡಲೇ ಬೇಕೆಂಬ ಆಸೆ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಸಂಗತಿ,'' ಎಂದು ರೋಜರ್ ತಮ್ಮ ತುಡಿತ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications