ವಿಂಬಲ್ಡನ್: ಲುಕಾಸ್ ಲಾಕೋ ವಿರುದ್ಧ ಗೆದ್ದ ಫೆಡರರ್ 3ನೇ ಸುತ್ತಿಗೆ

ಲಂಡನ್, ಜು. 5: ಎಂಟು ಬಾರಿಯ ವಿಶ್ವ ಚಾಂಪಿಯನ್ ರೋಜರ್ ಫೆಡರರ್ ವಿಂಬಲ್ಡನ್ ಚಾಂಪಿಯನ್ ಶಿಪ್ ನ 2ನೇ ಸುತ್ತಿನ ಪಂದ್ಯದಲ್ಲಿ ಲುಕಾಸ್ ಲಾಕೋ ವಿರುದ್ಧ ಜಯ ಸಾಧಿಸುವ ಮೂಲಕ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಸ್ಲೋವಾಕ್ ಆಟಗಾರ ಲುಕಾಸ್ ವಿರುದ್ಧ ಫೆಡರರ್ 6-4, 6-4, 6-1ರ ಜಯ ಸಾಧಿಸಿದರು.
ಮತ್ತೊಂದು ವಿಂಬಲ್ಡನ್ ಗೆಲುವಿನತ್ತ ಕಣ್ಣಿಟ್ಟಿರುವ 36ರ ಹರೆಯದ ಫೆಡರರ್ ವಿಶ್ವ 73ನೇ ಶ್ರೇಯಾಂಕಿತ ಲುಕಾಸ್ ಎದುರು ರೋಚಕ ಆಟ ಪ್ರದರ್ಶಿಸಿ ಗೆಲುವು ತನ್ನದಾಗಿಸಿಕೊಂಡರು. ಸೋಮವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಫೆಡರರ್ ಅವರು ದುಸಾನ್ ಲಜೊವಿಕ್ ವಿರುದ್ಧ ನೇರ ಸೆಟ್ ಗೆಲುವು ಸಾಧಿಸಿದ್ದರು.
ಅಗ್ರ ಶ್ರೇಯಾಂಕಿತ ರೋಜರ್, 3ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಜಾನ್-ಲೆನಾರ್ಡ್ ಸ್ಟ್ರಫ್ ವಿರುದ್ಧ ಸೆಣಸಲಿದ್ದಾರೆ. ಲೆನಾರ್ಡ್ ಸ್ಟ್ರಫ್ ಅವರು ಕ್ರೋಷಿಯನ್ ಆಟಗಾರ ಇವೊ ಕಾರ್ಲೋವಿಕ್ ವಿರುದ್ಧ 5 ಸೆಟ್ ಗಳ ಭರ್ಜರಿ ಕಾಳಗದಲ್ಲಿ ಜಯಿಸಿ ಮೂರನೇ ಸುತ್ತಿಗೆ ಮುನ್ನಡೆ ಸಾಧಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಫೆಡರರ್, 'ನಾನು ತುಂಬಾ ಚೆನ್ನಾಗಿ ಆಡಿದೆ. ಮಾನಸಿಕವಾಗಿಯೂ ನಾನು ಚೆನ್ನಾಗಿದ್ದೆ. ಮೊದಲ ಸುತ್ತಿನ ಪಂದ್ಯದಲ್ಲಾದರೂ ಕೊಂಚ ನರ್ವಸ್ ಆಗಿದ್ದೆ. ಆದರೆ ದ್ವಿತೀಯ ಸುತ್ತಿನಲ್ಲಿ ಅಷ್ಟೇನೂ ವಿಚಲಿತನಾಗದೆ ನನ್ನ ಆಟ ಆಡಿದೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications