ವಿಂಬಲ್ಡನ್: ರೋಜರ್ ಫೆಡರರ್, ಪ್ಲಿಸ್ಕೋವಾ 4ನೇ ಸುತ್ತಿಗೆ ಮುನ್ನಡೆ

ಲಂಡನ್, ಜು. 7: ಹಾಲಿ ಚಾಂಪಿಯನ್ ರೋಜರ್ ಫೆಡರರ್ ಗ್ರಾಸ್ ಕೋರ್ಟ್ ಟೆನಿಸ್ ನಲ್ಲಿ 175ನೇ ಗೆಲುವು ಸಾಧಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಪುರುಷರ ವಿಭಾಗದ ವಿಂಬಲ್ಡನ್ 3ನೇ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ರೋಜರ್ ಅವರು ಜಾನ್-ಲೆನಾರ್ಡ್ ಸ್ಟ್ರಾಫ್ ವಿರುದ್ಧ ಗೆಲುವು ದಾಖಲಿಸುವ ಮೂಲಕ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಸ್ವಿಟ್ಜರ್ ಲ್ಯಾಂಡ್ ನ ಆಟಗಾರ ಫೆಡರರ್ ಶ್ರೇಯಾಂಕಿತವಲ್ಲದ ಜರ್ಮನ್ ಆಟಗಾರ ಸ್ಟ್ರಾಫ್ ಅವರನ್ನು 6-3, 7-5, 6-2ರಿಂದ ಹಿಮ್ಮೆಟ್ಟಿಸಿದರು. ರೋಜರ್ ಅವರು ಆಡಿದ 200ನೇ ಗ್ರಾಸ್ ಕೋರ್ಟ್ ಪಂದ್ಯ ಇದಾಗಿತ್ತು.
3ನೇ ಸುತ್ತಿನ ವನಿತಾ ಸಿಂಗಲ್ಸ್ ಪಂದ್ಯದಲ್ಲಿ ಕ್ಯರೋಲಿನಾ ಪ್ಲಿಸ್ಕೋವಾ ಅವರೂ ರೊಮೇನಿಯನ್ ಆಟಗಾರ್ತಿ ಮಿಹೇಲಾ ಬುಜರ್ನೆಸ್ಕು ವಿರುದ್ಧ 3-6, 7-6(3), 6-1 ಅಂತರದ ಗೆಲುವು ಸಾಧಿಸುವ ಮೂಲಕ ವಿಂಬಲ್ಡನ್ ನಲ್ಲಿ ಇದೇ ಮೊದಲ ಬಾರಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
6ನೇ ಶ್ರೇಯಾಂಕಿತ ಜೆಕ್ ಆಟಗಾರ್ತಿ ಪ್ಲಿಸ್ಕೋವಾ ಅವರು 29ನೇ ಶ್ರೇಯಾಂಕಿತ ಎದುರಾಳಿ ಬುಜರ್ನೆಸ್ಕು ತಪ್ಪುಗಳ ಅನುಕೂಲ ಪಡೆಯುತ್ತಾ ಗೆಲುವು ತನ್ನದಾಗಿಸಿಕೊಂಡರು. ಅಗ್ರ ಶ್ರೇಯಾಂಕಿತೆ ಸಿಮೋನಾ ಹಾಲೆಪ್ ಅವರು ಇಂದು (ಶನಿವಾರ) ಮೂರನೇ ಸುತ್ತಿನ ಸ್ಪರ್ಧೆ ಎದುರಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications