Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

3 ವರ್ಷಗಳ ಬಳಿಕ ಕ್ಲೇ ಕೋಟ್‌ಗೆ ಮರಳಿದ ಫೆಡರರ್‌ ಮಾಡಿದ್ದೇನು?

Roger Federer wins on long-awaited clay return

ಮ್ಯಾಡ್ರಿಡ್‌, ಮೇ 08: ಮೂರು ವರ್ಷಗಳ ಸುದೀರ್ಘಾವಧಿಯ ಬಳಿಕ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಕ್ಲೇ ಕೋರ್ಟ್‌ ಟೆನಿಸ್‌ಗೆ ಮರಳಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ಎತ್ತಿ ಹಿಡಿದಿದ್ದಾರೆ.

ಮ್ಯಾಡ್ರಿಡ್‌ ಓಪನ್‌ನಲ್ಲಿ ಕಣಕ್ಕಿಳಿದ ವಿಶ್ವದ ಮಾಜಿ ನಂ.1 ಆಟಗಾರ ಫೆಡರರ್‌, ಮಂಗಳವಾರ ರಾತ್ರಿ ನಡೆದ ಅಂತಿಮ 32ರ ಘಟ್ಟದ ಪಂದ್ಯದಲ್ಲಿ 6-2, 6-3 ಅಂತರದ ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಅನುಭವಿ ಆಟಗಾರ ರಿಚರ್ಡ್‌ ಗ್ಯಾಸ್ಕೆಟ್‌ ಅವರನ್ನು ಬಗ್ಗುಬಡಿದರು.

ಅದರಲ್ಲೂ ಕೇವಲ 52 ನಿಮಿಷಗಳಲ್ಲಿ ಎದುರಾಳಿಯ ಹೆಡೆಮುರಿ ಕಟ್ಟಿದ ಫೆಡರರ್‌, ಮೂರು ವರ್ಷಗಳ ಬಳಿಕವೂ ಕ್ಲೇ ಕೋರ್ಟ್‌ನಲ್ಲಿ ತಮ್ಮ ಆಟ ಇನ್ನೂ ಭರ್ಜರಿಯಾಗೇ ಇದೆ ಎಂದು ತಮ್ಮ ಎದುರಾಳಿಗಳಿಗೆ ದಿಟ್ಟ ಸಂದೇಶ ಸಾರಿದ್ದಾರೆ.

ವಿಶ್ವ ದಾಖಲೆಯ 20 ಗ್ರ್ಯಾನ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳನ್ನು ಗೆದ್ದಿರುವ 37 ವರ್ಷದ ಅನುಭವಿ ಆಟಗಾರ ಫೆಡರರ್‌ ಪಂದ್ಯದ ಬಳಿಕ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು. "ದಿನವಿಡೀ ಆದಷ್ಟು ಶಾಂತಯುತವಾಗಿದ್ದೆ. ಆದರೆ, ಪಂದ್ಯಕ್ಕೂ ಎರಡು ತಾಸು ಮೊದಲು ಆತಂಕ ಆವರಿಸಿತ್ತು. ಆದರೆ, ಪಂದ್ಯ ಆರಂಭವಾದ ಬಳಿಕ ಕೆಲವೇ ನಿಮಿಷಗಳಲ್ಲಿ ಆತಂಕವೆಲ್ಲಾ ದೂರವಾಯಿತು. ಉತ್ತಮ ಆರಂಭ ಪಡೆದಿರುವುದಕ್ಕೆ ಸಂತಸವಿದೆ. ಕ್ಲೇ ಅಂಗಣಕ್ಕೆ ಮರಳಿರುವುದು ಖುಷಿ ಕೊಟ್ಟಿದೆ,'' ಎಂದು ಹೇಳಿದ್ದಾರೆ.

ಸದ್ಯ ವಿಶ್ವದ 3ನೇ ಶ್ರೇಯಾಂಕ ಹೊಂದಿರುವ ಫೆಡರರ್‌, 2016ರಲ್ಲಿ ರೋಮ್‌ ಮಾಸ್ಟರ್ಸ್‌ ಟೂರ್ನಿಯ 3ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ವಿರುದ್ಧ ಸೋತ ಬಳಿಕ ಕ್ಲೇ ಕೋರ್ಟ್‌ ಟೂರ್ನಿಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಇನ್ನು ಮ್ಯಾಡ್ರಿಡ್‌ ಅಂಗಣದಲ್ಲಿ ರೋಜರ್‌ 2006, 2009 ಮತ್ತು 2012ರಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಟೂರ್ನಿಯ ನಾಲ್ಕನೇ ಶ್ರೇಯಾಂಕಿತ ಆಟಗಾರ ಫೆಡರರ್‌ ಮುಂದಿನ ಪಂದ್ಯದಲ್ಲಿ ಹಂಗರಿಯ ಆಟಗಾರ ಮಾರ್ಕಸ್‌ ಫುಸ್ಕೊವಿಚ್ಸ್‌ ಅಥವಾ ಫ್ರಾನ್ಸ್‌ನ ಅನುಭವಿ ಹಾಗೂ 14ನೇ ಶ್ರೇಯಾಂಕಿತ ಗೇಲ್‌ ಮೋನ್ಫಿಲ್ಸ್‌ ಅವರ ಕಠಿಣ ಸವಾಲನ್ನು ಎದುರಿಸಲಿದ್ದಾರೆ.

Story first published: Wednesday, May 8, 2019, 21:40 [IST]
Other articles published on May 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+