For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ರೋಜರ್ ಫೆಡರರ್

Roger Federer Withdraws From Tokyo Olympics 2021 Due to knee Injury

ಬೆರ್ನ್: ಸ್ವಿಟ್ಜರ್‌ಲ್ಯಾಂಡ್‌ನ ಟೆನಿಸ್ ದಂತಕತೆ ರೋಜರ್ ಫೆಡರರ್ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ. ಫೆಡರರ್ ಅಭಿಮಾನಿಗಳಿಗೆ ಈ ಸಂಗತಿ ಆಘಾತ ತಂದಿದೆ. ಮೊಣಕಾಲು ಗಾಯಕ್ಕೀಡಾಗಿರುವ ಫೆಡರರ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ ಎಂದಿದ್ದಾರೆ.

20 ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ರೋಜರ್ ಫೆಡರರ್ ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ವಿಂಬಲ್ಡನ್ 2021ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಆಗ ಫೆಡರರ್ ತಾನು ಈ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು.

39ರ ಹರೆಯದ ರೋಜರ್ ಫೆಡರರ್ ಈ ಬೇಸಗೆಯ ಬಳಿಕ ಮತ್ತೆ ಸಂಪೂರ್ಣ ಚೇತರಿಸಿ ಸ್ಪರ್ಧೆಗಳಿಗೆ ಕಮ್‌ ಬ್ಯಾಕ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಬಾರಿಯ ವಿಂಬಲ್ಡನ್‌ನಲ್ಲಿ ಪೋಲ್ಯಾಂಡ್‌ನ ಹಬರ್ಟ್ ಹರ್ಕಾಕ್ಜ್ ವಿರುದ್ಧ ಫೆಡರರ್ 6-3, 7-6(4), 6-0ರ ಅಂತರದಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದರು.

ಜಪಾನ್‌ನ ಟೊಕಿಯೋದಲ್ಲಿ ಜುಲೈ 23ರಿಂದ ಆರಂಭಗೊಳ್ಳುವ ಒಲಿಂಪಿಕ್ಸ್ ಆಗಸ್ಟ್ 8ರಂದು ಕೊನೆಗೊಳ್ಳಲಿದೆ.

Story first published: Wednesday, July 14, 2021, 14:44 [IST]
Other articles published on Jul 14, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+