ದುಬೈ ಟೂರ್ನಿಯಿಂದ ಹಿಂದೆ ಸರಿದ ದಂತಕತೆ ರೋಜರ್ ಫೆಡರರ್

ಬರ್ನ್: ಸ್ವಿಟ್ಜರ್ಲ್ಯಾಂಡ್ ನ ಟೆನಿಸ್ ದಂತಕತೆ ರೋಜರ್ ಫೆಡರರ್ ಮುಂಬರಲಿರುವ ದುಬೈ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ತಾಳಿದ್ದಾರೆ. ಗಾಯಕ್ಕೀಡಾಗಿದ್ದ ಫೆಡರರ್ ಚೇತರಿಸಿಕೊಳ್ಳಲು 13 ತಿಂಗಳ ಸಮಯ ತೆಗೆದುಕೊಂಡಿದ್ದರು. ಹೀಗಾಗಿ ಹೆಚ್ಚು ಅಭ್ಯಾಸ ಅವಶ್ಯಕತೆಯಿರುವುದರಿಂದ ಮುಂದಿನ ಟೂರ್ನಿಯಿಂದ ದೂರ ಉಳಿಯುವುದಾಗಿ ಫೆಡರರ್ ಹೇಳಿದ್ದಾರೆ.
2020ರಲ್ಲಿ ಎರಡೆರಡು ಬಾರಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದ ರೋಜರ್ ಫೆಡರರ್ ಸುಮಾರು ಒಂದು ವರ್ಷದ ಕಾಲ ಸ್ಪರ್ಧೆಗಳಿಂದ ದೂರ ಉಳಿದಿದ್ದರು. ಆದರೆ ಕತಾರ್ ಓಪನ್‌ನಲ್ಲಿ ಆಡಿದ್ದ ಫೆಡರರ್ ಸುದೀರ್ಘ ದಿನಗಳ ಬಳಿಕ ಕಮ್‌ಬ್ಯಾಮ್ ಮಾಡಿದ್ದರು. ದ್ವಿತೀಯ ಸುತ್ತಿನಲ್ಲಿ ಗೆದ್ದಿದ್ದರು ಕೂಡ.
ಆದರೆ ಗುರುವಾರ (ಮಾರ್ಚ್ 11) ನಡೆದಿದ್ದ ಕತಾರ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಜಿಯಾದ ನಿಕೊಲೊಜ್ ಬೆಸಿಲಾಶ್ವಿಲಿ ವಿರುದ್ಧ 3-6, 6-1, 7-5ರ ಸೋಲನುಭವಿಸಿದ್ದ ಫೆಡರರ್ ಟೂರ್ನಿಯಿಂದ ಹೊರ ಬಿದ್ದಿದ್ದರು. ಮಾರ್ಚ್ 14ರಿಂದ ದುಬೈ ಟೂರ್ನಿ ಆರಂಭವಾಗಲಿದೆ.
'ಮತ್ತೆ ಪಂದ್ಯ ಆಡೋದಕ್ಕೆ ಖುಷಿಯಾಗಿತ್ತು. ಎಲ್ಲರಿಗೂ ಅನಂತ ಧನ್ಯವಾದ. ಆದರೆ ಮುಂಬರಲಿರುವ ದುಬೈ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ತಾಳಿದ್ದೇನೆ. ಯಾಕೆಂದರೆ ಮತ್ತೆ ಅಭ್ಯಾಸಕ್ಕೆ ತೆರಳಿ ಟೂರ್ನಿಗಳಲ್ಲಿ ಒಳ್ಳೆಯ ಫಲಿತಾಂಶ ತರಲು ಬಯಸಿದ್ದೇನೆ,' ಎಂದು 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ವಿಜೇತ ಫೆಡರರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications