US Open: ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೋಡಿ ಸೆಮೀಸ್‌ಗೆ
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ರೋಹನ್ ಬೋಪಣ್ಣ ಅವರು ಇಂಡೋನೇಷ್ಯಾದ ಅಲ್ದಿಲಾ ಸುಟ್ಜಿಯಾಡಿ ಅವರೊಂದಿಗೆ ಯುಎಸ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ರೋಹನ್ ಬೋಪಣ್ಣ ಜೋಡಿ ಗೆಲುವು ಸಾಧಿಸಿತು. ಬೋಪಣ್ಣ, ಅಲ್ದಿಲಾ ಜೋಡಿ 7-6 (7-4), 2-6, 10-7 ರಿಂದ ಮ್ಯಾಥ್ಯೂ ಎಬ್ಡೆನ್ ಮತ್ತು ಬಾರ್ಬೊರಾ ಕ್ರೆಜ್ಸಿಕೋವಾ ಅವರನ್ನು ಒಂದು ಗಂಟೆ ಮತ್ತು 33 ನಿಮಿಷಗಳಲ್ಲಿ ಕೋರ್ಟ್ 5 ನಲ್ಲಿ ಸೋಲಿಸಿದರು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಬೋಪಣ್ಣ ಜೋಡಿ ಮುನ್ನಡೆ ಸಾಧಿಸಿತು. ಟೈ ಬ್ರೇಕ್‌ರವರೆಗೂ ನಡೆದ ಪಂದ್ಯದಲ್ಲಿ 8ನೇ ಶ್ರೇಯಾಂಕದ ಜೋಡಿ ಬೋಪಣ್ಣ ಮತ್ತು ಸುಟ್ಜಿಯಾಡಿ 6-0 ಅಂಕಗಳ ಮುನ್ನಡೆ ಸಾಧಿಸಿತು. ಇದಾದ ಬಳಿಕ ಎದುರಾಳಿ ಜೋಡಿ ಕಮ್ ಬ್ಯಾಕ್ ಮಾಡಲು ಸಾಧ್ಯವೇ ಆಗಲಿಲ್ಲ.
ಸೆಮೀಸ್‌ನಲ್ಲಿ ಯಾರೊಂದಿಗೆ ಫೈಟ್?
44 ವರ್ಷದ ಬೋಪಣ್ಣ ಮತ್ತು 29ರ ಹರೆಯದ ಸುಟ್ಜಿಯಾಡಿ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಟೇಲರ್ ಟೌನ್‌ಸೆಂಡ್ ಮತ್ತು ಡೊನಾಲ್ಡ್ ಯಂಗ್ ಅವರ ಸವಾಲು ಎದುರಿಸಲಿದೆ. ಈ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ 6-7 (3-7), 6-3, 10-8 ಸೆಟ್‌ಗಳಿಂದ ಹ್ಯಾರಿ ಹೆಲಿಯೊವಾರಾ ಮತ್ತು ಅನ್ನಾ ಡ್ಯಾನಿಲಿನಾ ಜೋಡಿಯನ್ನು ಮಣಿಸಿತ್ತು. ಈ ಪಂದ್ಯವನ್ನು ಗೆದ್ದು ಮತ್ತೊಮ್ಮೆ ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ರೋಹನ್ ಬೋಪಣ್ಣ ಅವರದ್ದಾಗಿದೆ.
ಮೂರನೇ ಗ್ರ್ಯಾಮ್ ಸ್ಲ್ಯಾಮ್ ಕನಸು
ಈಗಾಗಲೇ ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸ್‌ನಲ್ಲಿ ಪ್ರಸಕ್ತ ವರ್ಷ ಆಸ್ಟ್ರೇಲಿಯನ್ ಒಪನ್ ಹಾಗೂ 2017ರಲ್ಲಿ ಫ್ರೆಂಚ್ ಓಪನ್ ಟೂರ್ನಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಈಗ ಬೋಪಣ್ಣ ಮೂರನೇ ಗ್ರ್ಯಾನ್ ಸ್ಲ್ಯಾಮ್ ಕನಸಿನಲ್ಲಿದ್ದಾರೆ.
ಸಿನ್ನರ್‌ಗೆ ಜಯ
ಅಗ್ರ ಶ್ರೇಯಾಂಕದ ಜಾನಿಕ್ ಸಿನ್ನರ್ ಯುಎಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇವರು ತಮ್ಮ ನೈಜ ಆಟವನ್ನು ಆಡುವಲ್ಲಿ ವಿಫಲರಾಗಿ ಟೈ ಬ್ರೇಕ್ ವರೆಗೂ ನಡೆದ ಪಂದ್ಯದಲ್ಲಿ ಜಯ ಸಾಧಿಸಿದರು. ಇವರು 7-6 (3), 7-6 (5), 6-1 ರಿಂದ ಟಾಮಿ ಪಾಲ್ ಅವರನ್ನು ಮಣಿಸಿದರು. ಕ್ವಾರ್ಟರ್ ಫೈನಲ್ ನಲ್ಲಿ 5ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications