ಡಬ್ಲ್ಯೂಟಿಎಗೆ ವಾಪಸ್ಸಾಗಿದ್ದನ್ನು ಜಯದೊಂದಿಗೆ ಸಾರಿ ಹೇಳಿದ ಸಾನಿಯಾ

ಹೊಬರ್ಟ್, ಜನವರಿ 14: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ, ವಿಮೆನ್ಸ್ ಟೆನಿಸ್ ಅಸೋಸಿಯೇಷನ್(ಡಬ್ಲ್ಯೂಟಿಎ)ಗೆ ವಾಪಸ್ಸಾಗಿದ್ದನ್ನು ಜಯದೊಂದಿಗೆ ಜಗತ್ತಿಗೆ ಸಾರಿ ಹೇಳಿದ್ದಾರೆ. ಹೊಬರ್ಟ್ ಇಂಟರ್ ನ್ಯಾಷನಲ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಜೋಡಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಸಾಧಿಸಿದೆ.
ಮಂಗಳವಾರ (ಜನವರಿ 14) ನಡೆದ ಪಂದ್ಯದಲ್ಲಿ ಸಾನಿಯಾ ಮತ್ತು ಅವರ ಉಕ್ರೇನ್ ಜೊತೆಗಾತಿ ನಾಡಿಯಾ ಕಿಚೆನೋಕ್, ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೋವಾ ಮತ್ತು ಜಪಾನ್‌ನ ಮಿಯು ಕ್ಯಾಟೊ ವಿರುದ್ಧ 2-6 7-6 (3) 10-3ರ ಜಯ ದಾಖಲಿಸಿತು.
ಜಾನಿಯಾ-ನಾಡಿಯಾ ಮತ್ತು ಒಕ್ಸಾನಾ-ಕ್ಯಾಟೊ ನಡುವಿನ ಕದನ ಸುಮಾರು 1 ಗಂಟೆ 41 ನಿಮಿಷಗಳವರೆಗೆ ನಡೆಯಿತು. ಭಾರತ-ಉಕ್ರೇನ್ ಜೋಡಿ ಮುಂದಿನ ಪಂದ್ಯದಲ್ಲಿ ಅಮೆರಿಕಾದ ವ್ಯಾನಿಯಾ ಕಿಂಗ್ ಮತ್ತು ಕ್ರಿಸ್ಟಿನಾ ಮೆಕ್‌ಹೇಲ್ ವಿರುದ್ಧ ಸ್ಪರ್ಧಿಸಲಿದೆ.
33ರ ಹರೆಯದ ಸಾನಿಯಾ, ತನ್ನ ಪುತ್ರ ಇಝಾನ್‌ಗೆ ಜನ್ಮ ನೀಡುವುದಕ್ಕಾಗಿ ಬಿಡುವು ತೆಗೆದುಕೊಳ್ಳುವುದಕ್ಕೂ ಮುನ್ನ ಗಾಯದ ಸಮಸ್ಯೆಯಿಂದ ಕೊಂಚ ಕಾಲ ಟೆನಿಸ್ ಅಂಗಳದಿಂದ ಹೊರಗುಳಿದಿದ್ದರು. ಅಂದರೆ ಸಾನಿಯಾ ಕಡೇಯ ಪಂದ್ಯವಾಡಿದ್ದು 2017ರ ಅಕ್ಟೋಬರ್‌ನಲ್ಲಿ ನಡೆದಿದ್ದ ಚೀನಾ ಓಪನ್‌ನಲ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications