For Quick Alerts
ALLOW NOTIFICATIONS  
For Daily Alerts

ಸಾನಿಯಾ ಮಿರ್ಝಾ-ಮ್ಯಾಟೆಕ್-ಸ್ಯಾಂಡ್ಸ್ ವಿಂಬಲ್ಡನ್ 2ನೇ ಸುತ್ತಿಗೆ ಪ್ರವೇಶ

Sania Mirza and Bethanie Mattek-Sands stun sixth seeds to enter to Wimbledon 2nd round

ಲಂಡನ್: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಮತ್ತು ಅವರ ಅಮೆರಿಕನ್ ಜೊತೆಗಾತಿ ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ವಿಂಬಲ್ಡನ್ ಚಾಂಪಿಯನ್‌ಶಿಪ್‌ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಗುರುವಾರ (ಜುಲೈ 1) ನಡೆದ ಪಂದ್ಯದಲ್ಲಿ ಭಾರತ-ಅಮೆರಿಕಾ ಜೋಡಿ ಮುನ್ನಡೆ ಗಿಟ್ಟಿಸಿಕೊಂಡಿದೆ.

ಆರಂಭಿಕ ಸುತ್ತಿನಲ್ಲಿ ಸಾನಿಯಾ ಮಿರ್ಝಾ-ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ಜೋಡಿ ಆರನೇ ಶ್ರೇಯಾಂಕಿತ ದೇಸಿರೆ ಕ್ರಾವ್ಜಿಕ್ (ಅಮೆರಿಕಾ)-ಅಲೆಕ್ಸಾ ಗೌರಾಚ್ (ಚಿಲಿ) ಜೋಡಿಯನ್ನು 7-5, 6-3ರ ಅಂತರದಿಂದ ಸೋಲಿಸಿದೆ. ಎರಡೂ ಜೋಡಿಯ ಮಧ್ಯೆ ಸುಮಾರು ಒಂದು ಗಂಟೆ 27 ನಿಮಿಷಗಳ ಕದನ ನಡೆಯಿತು.

ಪಂದ್ಯದ ಆರಂಭದಲ್ಲಿ ಇಂಡೋ-ಅಮೇರಿಕನ್ ಜೋಡಿಯ ಮೇಲೆ ಒತ್ತಡ ಹೇರಲಾಯಿತು, ಮ್ಯಾಟೆಕ್-ಸ್ಯಾಂಡ್ಸ್ ಮೂರನೇ ಗೇಮ್‌ ವೇಳೆ ಸರ್ವ್ ಮಾಡಿದಾಗ ಅದು ಏಳು ಡ್ಯೂಸ್ ಪಾಯಿಂಟ್‌ಗಳನ್ನು ಒಳಗೊಂಡಿತ್ತು. ಅಮೇರಿಕನ್ ಆಟಗಾರ್ತಿ ಮೂರು ಡಬಲ್ ಫಾಲ್ಟ್‌ಗಳನ್ನು ಸರ್ವ್ ಮಾಡಿದರು. ಆದರೆ ಅಂತಿಮವಾಗಿ ಮೂರು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದ ನಂತರ ಆಟ ಇಂಡೋ-ಅಮೆರಿಕನ್ ಜೋಡಿಯ ಕೈ ಹಿಡಿಯಿತು.

34ರ ಹರೆಯದ ಸಾನಿಯಾ ಮಿರ್ಝಾ ತನ್ನ ವೃತ್ತಿ ಜೀವನದಲ್ಲಿ 6 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ. 2013ರಲ್ಲಿ ಮಿರ್ಝಾ ಸಿಂಗಲ್ಸ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಡಬಲ್ಸ್‌ನಲ್ಲಿ ಮಿರ್ಝಾ ಮುಂದುವರೆಯುತ್ತಿರುವುದು ಭಾರತೀಯರಿಗೆ ಖುಷಿ ತಂದಿದೆ.

Story first published: Friday, July 2, 2021, 10:22 [IST]
Other articles published on Jul 2, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+