ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಸಾನಿಯಾಗೆ ದಂಡ
ಹೈದರಾಬಾದ್, ಆಗಸ್ಟ್ 11: ತೆಲಂಗಾಣ ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಸಂಚಾರಿ ನಿಯಮಗಳನ್ನು ಮೀರಿದ ಕಾರಣಕ್ಕೆ ದಂಡ ತೆತ್ತಿರುವ ಘಟನೆ ಸೋಮವಾರ ನಡೆದಿದೆ.
ವಾಹನ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

ಸಾನಿಯಾ ಮಿರ್ಜಾ ಅವರ ಟೊಯೋಟಾ ಫಾರ್ಚೂನ್ ಕಾರಿನ ನಂಬರ್ ಪ್ಲೇಟ್ ನಿಯಮದ ಅನ್ವಯ ಇರಲಿಲ್ಲ. ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿ ವಾಹನಗಳ ತಪಾಸಣೆ ವೇಳೆ ನಂಬರ್ ಪ್ಲೇಟ್ನಲ್ಲಿ ನಿಯಮ ಉಲ್ಲಂಘನೆಯನ್ನು ಗುರುತಿಸಿದ ಟ್ರಾಫಿಕ್ ಪೊಲೀಸರು ಸಾನಿಯಾ ಮಿರ್ಜಾಗೆ 200 ರೂಪಾಯಿ ದಂಡ ವಿಧಿಸಿದ್ದಾರೆ.ಸಾನಿಯಾ ಮಿರ್ಜಾ ಅವರಿಗೆ ಕಳುಹಿಸಿರುವ ಇ ಚಲನ್ ಇಲ್ಲಿದೆ:

ಈ ಹಿಂದೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಕೂಡಾ ಇದೇ ರೀತಿ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಶಿಷ್ಟ ವಿನ್ಯಾಸದ ಬುಲೇಟ್ ಬೈಕ್ ಹತ್ತಿ ತಮ್ಮ ಊರಲ್ಲಿ ಸಂಚರಿಸಿದ ಧೋನಿ ಅವರಿಗೆ ಅಲ್ಲಿನ ಪೊಲೀಸರು ದಂಡ ವಿಧಿಸಿದ್ದರು. (ಐಎಎನ್ ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications