ಸಾನಿಯಾ ಮಿರ್ಜಾ- ಹಿಂಗಿಸ್ ಗೆ ವಿಂಬಲ್ಡನ್ ಗರಿ
ಲಂಡನ್, ಜುಲೈ 12: ಭಾರತದ ಸಾನಿಯಾ ಮಿರ್ಜಾ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ್ತಿ ಸ್ವಿಟ್ಜರ್ಲೆಂಡ್ ನ ಮಾರ್ಟಿನ್ ಹಿಂಗಿಸ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಕಿರೀಟ ಧರಿಸಿದ್ದಾರೆ. ವಿಂಬಲ್ಡನ್ 2015ನ ರೋಚಕ ಅಂತಿಮ ಹಣಾಹಣಿಯಲ್ಲಿ ಈ ಜೋಡಿ ರಷ್ಯಾದ ಜೋಡಿಯನ್ನು ಮಣಿಸಿದೆ.
ಇದಕ್ಕೂ ಮುನ ಸೆಮಿ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಅಮೆರಿಕದ ರಾಕ್ವೆಲ್ ಕೊಪ್ಸ್ ಹಾಗೂ ಅಬಿಗೆಲ್ ಸ್ಪಿಯರ್ಸ್ ಅವರನ್ನು ಸಾನಿಯಾ ಹಾಗೂ ಹಿಂಗಿಸ್ ಜೋಡಿ 1-6, 2-6 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಎರಡನೇ ಬಾರಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ಸಾನಿಯಾ ಮಿರ್ಜಾ ಅವರಿಗೆ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಲಭಿಸಿದೆ.[ಇತಿಹಾಸ ನಿರ್ಮಿಸಿದ ಸೆರೆನಾ ಅತ್ಯಂತ ಹಿರಿಯ ವಿಂಬಲ್ಡನ್ ಕ್ವೀನ್]

ವಿಂಬಲ್ಡನ್ ಡಬಲ್ಸ್ ಫೈನಲ್ ನಲ್ಲಿ ರಷ್ಯಾದ ಎಕಟೆರಿನಾ ಮಕರೋವಾ ಹಾಗೂ ಎಲೇನಾ ವೆಸ್ನಿನಾ ಅವರನ್ನು 5-7, 7-6 (7-4), 7-5 ಅಂತರದಿಂದ ಸೋಲಿಸಿದ ಸಾನಿಯಾ ಮೊದಲ ವಿಂಬಲ್ಡನ್ ಗ್ರಾನ್ ಸ್ಲಾಮ್ ಗೆದ್ದ ಸಂತಸದಲ್ಲಿದ್ದಾರೆ. ಡಬಲ್ಸ್ ಶ್ರೇಯಾಂಕದಲ್ಲಿ ಸಾನಿಯಾ ವಿಶ್ವದ ನಂ.1 ಆಗಿದ್ದರೆ, ಮಾರ್ಟಿನಾ ಹಿಂಗಿಸ್ ನಂ.2 ಸ್ಥಾನದಲ್ಲಿದ್ದಾರೆ.
1997ರಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿದ್ದ ಮಾರ್ಟಿನಾ ಹಿಂಗಿಸ್ ಅವರು ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ 1998ರಲ್ಲಿ ಮಹಿಳಾ ಡಬಲ್ಸ್ ಗೆದ್ದಿದ್ದರು. ಮೊಟ್ಟ ಮೊದಲ ಬಾರಿಗೆ ಸಾನಿಯಾ ಜೊತೆ ಸೇರಿ ಪ್ರತಿಷ್ಠಿತ ಟೂರ್ನಿಯನ್ನು ಗೆದ್ದಿದ್ದಾರೆ.
ಸೆಂಟರ್ ಕೋರ್ಟಿನಲ್ಲಿ ನಡೆದ ಪಂದ್ಯದಲ್ಲಿ ಹಿಂಗಿಸ್ ಹಾಗೂ ಮಿರ್ಜಾ ಜೋಡಿ ಎರಡನೇ ಸೆಟ್ ನಲ್ಲಿ ಟೈ ಬ್ರೇಕರ್ ಪ್ರವೇಶಿಸಿ 5-2 ಮುನ್ನಡೆ ಸಾಧಿಸಿ ಅಂತಿಮವಾಗಿ ಗೆಲುವಿನ ನಗೆ ಬೀರಿದರು. ಭಾನುವಾರ ಸಂಜೆ ಮಾರ್ಟಿನಾ ಹಿಂಗಿಸ್ ಅವರು ಮಿಶ್ರ ಡಬಲ್ಸ್ ಫೈನಲ್ಸ್ ನಲ್ಲಿ ಆಡುತ್ತಿರುವುದು ಮತ್ತೊಂದು ವಿಶೇಷ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications