For Quick Alerts
ALLOW NOTIFICATIONS  
For Daily Alerts

ಸಿಂಗಪುರ: ಟ್ರೋಫಿ ಗೆದ್ದ ಸಾನಿಯಾ-ಮಾರ್ಟಿನಾ ವಿಶ್ವದ ನಂ.1

By Mahesh

ಸಿಂಗಪುರ, ನ.01: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು ಸಿಂಗಪುರ ಡಬ್ಲ್ಯೂಟಿಎ ಫೈನಲ್ ನಲ್ಲಿ ಭರ್ಜರಿ ವಿಜಯ ದಾಖಲಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ಯಶಸ್ವಿ ಜೋಡಿ 9ನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕದ ವಿಶ್ವದ ಡಬಲ್ಸ್ ನಂ. 1 ಜೋಡಿ ಎನಿಸಿಕೊಂಡಿದೆ.

ಟಾಪ್ ಸೀಡ್ ನ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು ಎಂಟನೇ ಸೀಡ್ ನ ಗಾರ್ಬಿನ್ ಮುಗುರುಜಾ ಹಾಗೂ ಕರ್ಲಾ ಸ್ವಾರೇಜ್ ನವರೋ ಅವರನ್ನು ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ 6-0, 6-3 ನೇರ ಸೆಟ್ ಗಳಲ್ಲಿ ಜಯ ದಾಖಲಿಸಿದ್ದಾರೆ. ಸುಮಾರು ಒಂದು ಗಂಟೆ 6 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 9ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Sania Mirza-Martina Hingis Crowned Champions at WTA Finals Singapore

ಪ್ರಸಕ್ತ ವರ್ಷದಲ್ಲಿ ಹಿಂಗಿಸ್ ಹಾಗೂ ಮಿರ್ಜಾ ಅವರು 10 ಫೈನಲ್ ಗಳನ್ನು ಪ್ರವೇಶಿಸಿ 9-1 ನಂತೆ ಯಶಸ್ಸು ಗಳಿಸಿದ್ದಾರೆ.
* ಎರಡು ಗ್ರ್ಯಾನ್ ಸ್ಲಾಮ್ (ವಿಂಬಲ್ಡನ್, ಯುಎಸ್ ಓಪನ್) [ಪತ್ನಿ ಸಾನಿಯಾ ಸ್ಫೂರ್ತಿಯಿಂದ ಶತಕ ಬಾರಿಸಿದ ಶೊಯೆಬ್]
* ಐದು ಡಬ್ಲ್ಯೂಟಿಎ ಪ್ರಿಮಿಯರ್ ಪ್ರಶಸ್ತಿ (ಬಿಎನ್ ಪಿ ಪರಿಬಾಸ್ ಓಪನ್, ಇಂಡಿಯನ್ ವೆಲ್ಸ್, ಮಿಯಾಮಿ ಓಪನ್, ಫ್ಯಾಮಿಲಿ ಸರ್ಕಲ್ ಕಪ್- ಚಾರ್ಲೆಸ್ಟನ್, ಡೊಂಗ್ ಫೆಂಗ್ ಮೋಟರ್ ವುಹಾನ್ ಓಪನ್, ಚೀನಾ ಓಪನ್-ಬೀಜಿಂಗ್)
* ಒಂದು ಡಬ್ಲ್ಯೂಟಿಎ ಅಂತಾರಾಷ್ಟ್ರೀಯ ಪ್ರಶಸ್ತಿ (ಗ್ವಾಜಾಂಹೋ ಅಂತಾರಾಷ್ಟ್ರೀಯ ಮಹಿಳೆಯರ ಓಪನ್ಸ್) [ಮಿರ್ಜಾ-ಹಿಂಗಿಸ್ ಜೋಡಿ, ಯುಎಸ್ ಓಪನ್ ನಲ್ಲೂ ಮೋಡಿ]

ಸಾನಿಯಾ ಮಿರ್ಜಾ ಅವರ ಸಾಧನೆಯನ್ನು ಪರಿಗಣಿಸಿದ ಕ್ರೀಡಾ ಸಚಿವಾಲಯ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಾರೆ, ಈ ಜೋಡಿ 6 ಪ್ರಮುಖ ಟೂರ್ನಿಗಳಿಂದ 22 ಪಂದ್ಯಗಳಿಂದ ಅಜೇಯವಾಗಿ ಉಳಿದಿದೆ. ಮಾರ್ಟಿನಾ ಹಿಂಗಿಸ್ ಅವರಿಗೆ ಸಿಂಗಪುರ ಡಬ್ಲ್ಯೂಟಿಎ ಪ್ರಶಸ್ತಿ ವಿಶೇಷವಾಗಿದ್ದು, ಇದು ಅವರ ವೃತ್ತಿ ಬದುಕಿನ 50ನೇ ಡಬ್ಲ್ಯೂಟಿಎ ಡಬಲ್ಸ್ ಪ್ರಶಸ್ತಿಯಾಗಿದೆ. ವಿಶ್ವದ 15 ಮಂದಿ ಆಟಗಾರರು ಮಾತ್ರ ಈ ಮೈಲಿಗಲ್ಲು ದಾಟಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:14 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+