ಮಿರ್ಜಾ-ಹಿಂಗಿಸ್ ಜೋಡಿ, ಯುಎಸ್ ಓಪನ್‌ನಲ್ಲೂ ಮೋಡಿ
ನ್ಯೂಯಾರ್ಕ್, ಸೆಪ್ಟೆಂಬರ್. 14: ಈ ಬಾರಿಯ ಯುಎಸ್ ಓಪನ್ ಭಾರತೀಯರಿಗೆ ಡಬಲ್ ಖುಷಿ ನೀಡಿದೆ. ಮಿಶ್ರ ಡಬಲ್ಸ್ ನಲ್ಲಿ ಶನಿವಾರ ಲಿಯಾಂಡರ್ ಪೇಸ್ ಹಿಂಗಿಸ್ ಜೋಡಿ ಪ್ರಶಸ್ತಿ ಜಯಿಸಿದ್ದರೆ ಭಾನುವಾರ ಸಾನಿಯಾ ಮಿರ್ಜಾ-ಮಾರ್ಟಿನಾ ಹಿಂಗಿಸ್ ಜೋಡಿ ವನಿತೆಯರ ವಿಭಾಗದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಹಿಂಗಿಸ್ 6-3, 6-3ರ ನೇರ ಸೆಟ್‌ಗಳಲ್ಲಿ ಆಸ್ಟ್ರೇಲಿಯಾದ ಕೆಸೆ ಡೆಲಾಕಾ ಮತ್ತು ಕಜಕಸ್ತಾನದ ಯರೊಸ್ಲಾವಾ ಶ್ವೆಡೋವಾ ಅವರನ್ನು ಮಣಿಸಿ ಮತ್ತೊಮ್ಮೆ ತಮ್ಮ ಅದ್ಭುತ ಪ್ರದರ್ಶನ ನೀಡಿದರು. [ಸಾನಿಯಾ ಮಿರ್ಜಾ- ಹಿಂಗಿಸ್ ಗೆ ವಿಂಬಲ್ಡನ್ ಗರಿ]

ಅಗ್ರ ಶ್ರೇಯಾಂಕ್ ಸಾನಿಯಾ-ಹಿಂಗಿಸ್ ಜೋಡಿ ಆಟದ ಎದುರು ಆಸ್ಟ್ರೇಲಿಯಾದ ಕೆಸೆ ಡೆಲಾಕಾ ಮತ್ತು ಕಜಕಸ್ತಾನದ ಯರೊಸ್ಲಾವಾ ಶ್ವೆಡೋವಾ ಮಂಕಾದರು. 70 ನಿಮಿಷ ಆಟದಲ್ಲಿ ಸಾನಿಯಾ-ಹಿಂಗಿಸ್ ಜೋಡಿಯ ಶಿಸ್ತುಬದ್ಧ ಸರ್ವ್‌ಗಳು ಪಂದ್ಯದ ಹೈಲೈಟ್ಸ್. ಇತ್ತೀಚೆಗೆ ವಿಂಬಲ್ಡನ್ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದ ಜೋಡಿ ಮತ್ತೊಮ್ಮೆ ಸಾಧನೆ ಮಾಡಿದೆ. [ಯುವರಾಜ್ ಸಿಂಗ್ ಮೆಚ್ಚದ ಸಾನಿಯಾ-ಶೋಯೆಬ್ ನೃತ್ಯ]
ಜೋಡಿಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಪೆನೆಟ್ಟಾ ಮಹಿಳಾ ವಿಭಾಗದ ಚಾಂಪಿಯನ್:
ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಕಣದಲ್ಲಿ ಇಟಲಿಯ ಫ್ಲಾವಿಯಾ ಪೆನೆಟ್ಟಾ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಜಯಿಸಿದ್ದಾರೆ. 33 ವರ್ಷದ ಆಟಗಾರ್ತಿ ತನ್ನದೇ ರಾಷ್ಟ್ರದ ರಾಬರ್ಟಾ ವಿನ್ಸಿಯನ್ನು ಮಣಿಸಿ ಗ್ರ್ಯಾಂಡ್ ಸ್ಲಾಂ ವಿಜಯಿಯಾಗಿದ್ದು ಅಭಿಮಾನಿಗಳಳಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಇದೇ ನನ್ನ ಕೊನೆಯ ಪಂದ್ಯಾವಳಿಯಾಗಿದ್ದು ಟೆನಿಸ್ ನಿಂದ ನಿವೃತ್ತಿ ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications