Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೆಡ್‌ ಕಪ್ ಹಾರ್ಟ್ ಪ್ರಶಸ್ತಿಗೆ ಸಾನಿಯಾ ಮಿರ್ಝಾ ನಾಮನಿರ್ದೇಶನ

Sania Mirza nominated for Fed Cup Heart award

ನವದೆಹಲಿ, ಏಪ್ರಿಲ್ 30: ಏಷ್ಯಾ/ಓಷಿಯಾನಿಯಾ ಝೋನ್‌ನಿಂದ ಫೆಡ್‌ಕಪ್‌ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಚೊಚ್ಚಲ ಆಟಗಾರ್ತಿಯಾಗಿ ಟೆನಿಸ್ ತಾರೆ ಸಾನಿಯಾ ಮಿರ್ಝಾ ಗುರುತಿಸಿಕೊಂಡಿದ್ದಾರೆ. ಇಂಡೋನೇಷ್ಯಾದ ಪ್ರಿಸ್ಕಾ ಮೆಡೆಲಿನ್ ನುಗ್ರೋಹೋ ಕೂಡ ಇದೇ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಸುಮಾರು 4 ವರ್ಷಗಳ ಬಳಿಕ ಫೆಡ್‌ ಕಪ್‌ಗೆ ಟೂರ್ನಿಗೆ ಸಾನಿಯಾ ಮಿರ್ಝಾ ಕಮ್‌ಬ್ಯಾಕ್‌ ಮಾಡಿದ್ದರು. ಈಗ 18 ತಿಂಗಳ ಪುತ್ರ ಇಝಾನ್‌ ಹೊಂದಿರುವ ಸಾನಿಯಾ, ಈ ಬಾರಿಯ ಫೆಡ್‌ ಕಪ್‌ನಲ್ಲಿ ಭಾರತ ತಂಡ ಇದೇ ಚೊಚ್ಚಲ ಬಾರಿಗೆ ಪ್ಲೇ ಆಫ್‌ಗೆ ಪ್ರವೇಶಿಸಲು ನೆರವು ನೀಡಿದ್ದರು.

'2003ರಲ್ಲಿ ಮೊದಲ ಬಾರಿಗೆ ಇಂಡಿಯಾ ಕಲರ್‌ನಲ್ಲಿ ಮೈದಾನಕ್ಕಿಳಿಯಲು ಹೆಮ್ಮೆಯ ಕ್ಷಣ ಅನ್ನಿಸಿತ್ತು. ಸುಮಾರು 18 ವರ್ಷಗಳ ಕಾಲ ಭಾರತದ ಟೆನಿಸ್‌ಗೆ ಒಂದಿಷ್ಟು ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದೇನೆ ಎನ್ನಲು ಇನ್ನೂ ಹೆಮ್ಮೆ ಅನ್ನಿಸುತ್ತದೆ,' ಎಂದು ಸಾನಿಯಾ ಹೇಳಿದ್ದಾರೆ.

'ಕಳೆದ ತಿಂಗಳ ಫೆಡ್‌ ಕಪ್‌ ಫಲಿತಾಂಶ ಏಷ್ಯಾ/ಓಷಿಯಾನಿಯಾ ಟೂರ್ನಮೆಂಟ್‌ನಲ್ಲಿ ನನ್ನ ವೃತ್ತಿ ಬದುಕಿನ ದೊಡ್ಡ ಸಾಧನೆಯಾಗಿ ಗುರುತಿಸಿಕೊಂಡಿತ್ತು. ಫೆಡ್‌ ಕಪ್‌ ಹಾರ್ಟ್ ಅವಾರ್ಡ್‌ಗೆ ನನ್ನನ್ನು ಆರಿಸಿ ಪರಿಗಣಿಸಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ,' ಎಂದು 33ರ ಹರೆಯದ ಸಾನಿಯಾ ಖುಷಿ ವ್ಯಕ್ತಪಡಿಸಿದ್ದಾರೆ.

Story first published: Friday, May 1, 2020, 9:17 [IST]
Other articles published on May 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+