Sania Mirza: ಮೈಖೇಲ್ ಜೊತೆಗೆ ಮನಬಿಚ್ಚಿ ಮಾತನಾಡಿದ ಸಾನಿಯಾ ಮಿರ್ಜಾ: ಟೆನಿಸ್‌ನ ಮುಂದಿನ ಭವಿಷ್ಯದ ಬಗ್ಗೆ ಹೇಳಿದ್ದೇನು?
ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜ ಮೈದಾನದಿಂದ ದೂರ ಸರಿದಿದ್ದಾರೆ. ಆದರೆ ಅವರಿಗೆ ಟೆನಿಸ್ ಮೇಲಿನ ಪ್ರೀತಿ ಇನ್ನು ಸಹ ಕಮ್ಮಿ ಆಗಿಲ್ಲ. ಟೆನಿಸ್ ನಿಂದ ದೂರ ಸರಿದರೂ ಸಹ ಸಾನಿಯಾ ತಮ್ಮ ಸಮಯವನ್ನು ಕ್ರೀಡೆಗೆ ಮೀಸಲು ಇಟ್ಟಿದ್ದಾರೆ. ಈ ಬ್ಯೂಸಿ ಶೆಡ್ಯೂಲ್ ನಡುವೆ ತಮ್ಮ ಮಗನ ಲಾಲನೆ ಹಾಗೂ ಪಾಲನೆಯ ಜವಾಬ್ದಾರಿ ಸಹ ಇವರು ಹೊತ್ತು ಕೊಂಡಿದ್ದಾರೆ. ಭಾರತ ಟೆನಿಸ್ ಲೋಕವನ್ನು ಆಳಿದ ಕೆಲವೇ ಕೆಲವು ಮಹಿಳಾ ಆಟಗಾರ್ತಿಯಲ್ಲಿ ಸಾನಿಯಾ ಮಿರ್ಜಾಗೆ ಅಗ್ರ ಸ್ಥಾನ.
ಟೆನಿಸ್‌ನಿಂದ ಹಿಂದೆ ಸರಿದಿರುವ ಸಾನಿಯಾ ಮಿರ್ಜಾ ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಸಾನಿಯಾ ಮೈಖೇಲ್ ಜೊತೆಗೆ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾನಿಯಾ ಮಿರ್ಜಾ ಯಾವೆಲ್ಲಾ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.

ಟೆನಿಸ್ ಋತು ಆರಂಭವಾಗಿದೆ. ಜೋಕೊ ಈ ವರ್ಷದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲಬಹುದೇ?
ಸಾನಿಯಾ ಮಿರ್ಜಾ: ಟೆನಿಸ್ ಅಂಗಳದಲ್ಲಿ ಸರ್ಬಿಯಾದ ನೋವಾಕ್ ಜೋಕೊವಿಚ್ ಇಳಿಯುವವರೆಗೂ ಅವರನ್ನು ನಿರ್ಲಕ್ಷಿಸುವ ಅವಶ್ಯಕತೆ ಇಲ್ಲ. ಅವರು ಗೆಲ್ಲಬಹುದು ಎಂದು ಅವರು ಭಾವಿಸಿದ್ದರೆ ಮಾತ್ರ ಅಂಗಳಕ್ಕೆ ಇಳಿಯುತ್ತಾರೆ. ಇನ್ನು ಈ ಬಾರಿ ಅವರ ತಂಡ ಸಹ ಬಲಾಢ್ಯವಾಗಿದೆ. ಇವರ ತಂಡಕ್ಕೆ ಬ್ರಿಟನ್‌ನ ಆಂಡಿ ಮರ್ರೆ ಸ್ಥಾನ ಪಡೆದಿದ್ದಾರೆ.
ಟೆನಿಸ್ ಲೋಕದಲ್ಲಿ ಕಾಣಿಸಿಕೊಂಡಿರುವ ಡೋಪಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಸಾನಿಯಾ ಮಿರ್ಜಾ: ಡೋಪಿಂಗ್ ಎಲ್ಲ ಕ್ರೀಡಾ ಕ್ಷೇತ್ರದಲ್ಲೂ ಕಾಲಿಟ್ಟಿದೆ. ಆಟಗಾರ ನಿಯಮಗಳನ್ನು ಮೀರಿದಾಗ ದಂಡನೆಗೆ ಒಳಗೆ ಒಳಗಾಗುತ್ತಾನೆ ಎಂದು ಮಾತ್ರ ಹೇಳಬಹುದು.
ಟೆನಿಸ್ ಋತುಗಳು ದೀರ್ಘವಾಗಿ ಇರುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ಸಾನಿಯಾ ಮಿರ್ಜಾ: ಇದಕ್ಕೆಲ್ಲಾ ನಿಜವಾದ ಯೋಜನೆ ಬಹಳ ಮುಖ್ಯ. ಇನ್ನು ಆಟಗಾರ ಮನಸ್ಸು ಮಾಡಿದ್ರೆ ಕೆಲವು ಈವೆಂಟ್‌ಗಳನ್ನು ಸಹ ಮಿಸ್ ಮಾಡಿಕೊಳ್ಳಬಹುದು.

ಮಹಿಳಾ ಟೆನಿಸ್‌ನಲ್ಲಿ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡುತ್ತಿದೆಯಾ? ಈ ವರ್ಷ ಹೇಗೆ ನೋಡುತ್ತಾ ಇದ್ದೀರಿ?
ನಿಶ್ಚಿತವಾಗಿ ಹೇಳಬೇಕು ಎಂದರೆ ಮಹಿಳಾ ಟೆನಿಸ್‌ನಲ್ಲೂ ಉದಯೋನ್ಮುಖ ಸ್ಟಾರ್ ಆಟಗಾರರು ಇದ್ದಾರೆ. ಈ ಯುವ ಆಟಗಾರರ ತಮ್ಮ ಕ್ಷಮತೆಯ ಮೂಲಕ ಈಗಾಗಲೇ ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಟ್ಟಿದ್ದಾರೆ.
ಟೆನಿಸ್ ರಾಫೆಲ್ ನಡಾಲ್ ಅವರ ಆಟವನ್ನು ಮಿಸ್ ಮಾಡಿಕೊಳ್ಳುತ್ತದಾ?
ಖಂಡಿತವಾಗಿ ಸ್ಟಾರ್ ಆಟಗಾರರು ಮೈದಾನದಿಂದ ದೂರ ಸರಿದಾಗ ಅವರ ಅನುಪಸ್ಥಿತಿ ಬಹು ದಿನಗಳ ಕಾಲ ಕಾಡುತ್ತದೆ. ಟೆನಿಸ್ ಹೊಸ ಸೂಪರ್ ಸ್ಟಾರ್‌ಗಳನ್ನು ಸರಿಯಾದ ಸಮಯದಲ್ಲಿ ಹುಟ್ಟುಹಾಕುವ ಸಾಮರ್ಥ್ಯವನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications