Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾನಿಯಾ ಮಿರ್ಜಾಗೆ ರಾಜೀವ್ ಗಾಂಧಿ ಖೇಲ್ ರತ್ನ?

ನವದೆಹಲಿ, ಆ. 01: ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ಶನಿವಾರ ತಿಳಿಸಿದೆ.

ಇತ್ತೀಚೆಗೆ ಸಾನಿಯಾ ಮಿರ್ಜಾ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಸ್ವಿಸ್ ನ ಮಾರ್ಟಿನಾ ಹಿಂಗೀಸ್ ಜತೆಗೂಡಿ ಸಾನಿಯಾ ಮಿರ್ಜಾ ವಿಂಬಲ್ಡನ್ ಮಹಿಳಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.[ಯುವರಾಜ್ ಸಿಂಗ್ ಮೆಚ್ಚದ ಸಾನಿಯಾ-ಶೋಯೆಬ್ ನೃತ್ಯ]

sania mirza

ಕ್ರೀಡಾ ಸ್ಪರ್ಧಿಗಳಿಗೆ ನೀಡಲಾಗುವ ಅತ್ಯುನ್ನತ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ಅಂತಿಮ ನಿರ್ಧಾರ ಪ್ರಶಸ್ತಿ ಸಮಿತಿ ಕೈಗೊಳ್ಳಲಿದೆ ಎಂದು ಕ್ರೀಡಾ ಕಾರ್ಯದರ್ಶಿ ಅಜಿತ್ ಶರ್ಮಾ ಹೇಳಿದ್ದಾರೆ.

ಅಖಿಲ ಭಾರತ ಟೆನ್ನಿಸ್ ಅಸೋಸಿಯೇಷನ್ ನಿಂದ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಹೆಸರು ಶಿಫಾರಸ್ಸು ತಡವಾಗಿ ಬಂದಿದೆ. ಆದರೂ ಈ ಶಿಫಾರಸನ್ನು ನಾವು ಅಂಗೀಕರಿಸಿದ್ದು ಪ್ರಶಸ್ತಿ ಸಮಿತಿ ಅಂತಿಮ ನಿರ್ಧಾರಕೈಗೊಳ್ಳಲಿದೆ ಎಂದು ತಿಳಿಸಿದೆ.[ಸಾನಿಯಾ, ಲಿಯಾಂಡರ್, ಸುಮಿತ್ ತ್ರಿಬ್ಬಲ್ ಧಮಾಕ]

ವೃತ್ತಿ ಜೀವನದಲ್ಲಿ ಮೂರು ಗ್ರಾಂಡ್ ಸ್ಲಾಂ ಗೆದ್ದಿರುವ ಸಾನಿಯಾ ಮಿರ್ಜಾ ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. ಪ್ರಶಸ್ತಿಗೆ ಸಾನಿಯಾ ಮತ್ತು ಸ್ಕ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ನಡುವೆ ಹಣಾಹಣಿ ಏರ್ಪಟ್ಟಿದೆ ಎಂದು ಮೂಲಗಳು ಹೇಳಿವೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+