ವಿಂಬಲ್ಡನ್‌ನಲ್ಲಿ ಐತಿಹಾಸಿಕ ಪಂದ್ಯ ಗೆದ್ದ ಸಾನಿಯಾ ಮಿರ್ಝಾ-ರೋಹನ್ ಬೋಪಣ್ಣ

ಲಂಡನ್: ವಿಂಬಲ್ಡನ್‌ನಲ್ಲಿ ಶುಕ್ರವಾರ (ಜುಲೈ 2) ನಡೆದ ಐತಿಹಾಸಿಕ ಆಲ್ ಇಂಡಿಯನ್ ಮಿಕ್ಸ್ಡ್ ಡಬಲ್ಸ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಭಾರತದ ಅನುಭವಿ ಜೋಡಿ ರೋಹನ್ ಬೋಪಣ್ಣ-ಸಾನಿಯಾ ಮಿರ್ಝಾ ಮುನ್ನಡೆ ಗಿಟ್ಟಿಸಿದೆ. ಸಾನಿಯಾ-ಬೋಪಣ್ಣ ಜೋಡಿ ಭಾರತದವರೇ ಆದ ರಾಜ್‌ಕುಮಾರ್ ರಾಮನಾಥನ್ ಮತ್ತು ಅಂಕಿತಾ ರೈನಾ ಜೋಡಿಯನ್ನು ಸೋಲಿಸಿದೆ.
ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಯೊಂದರಲ್ಲಿ ಭಾರತೀಯ ಜೋಡಿಗಳೆರಡು ಮುಖಾಮುಖಿಯಾಗಿದ್ದು ಇದೇ ಮೊದಲ ಬಾರಿ. ಆದರೆ ಭಾರತದ ರಾಜ್‌ಕುಮಾರ್ ರಾಮನಾಥನ್ ಕಡೆಗೂ ಸತತ ಪ್ರಯತ್ನದ ಬಳಿಕ ಮಿಕ್ಸ್ಡ್ ಡಬಲ್ಸ್ ಮೂಲಕ ವಿಂಬಲ್ಡನ್‌ಂತ ಪ್ರಮುಖ ಟೆನಿಸ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ. ಇದಕ್ಕೂ ಮುನ್ನ ರಾಮನಾಥನ್ ಒಟ್ಟು 21 ಬಾರಿ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆಗಾಗಿ ಪ್ರಯತ್ನಿಸಿ ಸೋತಿದ್ದರು.
ಮಿಕ್ಡ್ಸ್ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಝಾ-ರೋಹನ್ ಬೋಪಣ್ಣ ಜೋಡಿ ರಾಜ್‌ಕುಮಾರ್ ರಾಮನಾಥನ್-ಅಂಕಿತಾ ರೈನಾ ಜೋಡಿಯನ್ನು 6-2, 7-6 (7-5)ರ ಅಂತರದಿಂದ ಸೋಲಿಸಿದೆ. ಪಂದ್ಯ ಪೈಪೋಟಿಯಿಂದ ಕೂಡಿತ್ತು ಅನ್ನೋದಕ್ಕೆ ಎರಡೂ ಜೋಡಿಯ ಮಧ್ಯೆ ನಡೆದ 69 ನಿಮಿಷಗಳ ಕಾಳಗವೇ ಸಾಕ್ಷಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications