ಟೆನಿಸ್ : ಯುಎಸ್ ಓಪನ್ ಗೆದ್ದ ಸಾನಿಯಾ ಮಿರ್ಜಾ
ನ್ಯೂಯಾರ್ಕ್, ಸೆ.6: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಯುಎಸ್ ಓಪನ್ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಗೆಲುವು ಸಾಧಿಸಿ ಕಪ್ ಎತ್ತಿದ್ದಾರೆ. ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್‌ನ ಬ್ರೂನೋ ಸೋರೆಸ್ ಜೋಡಿ ಯುಎಸ್ ಹಾಗೂ ಮೆಕ್ಸಿಕನ್ ಜೋಡಿಯನ್ನು ಮಣಿಸಿ ವಿಜಯ ಸಾಧಿಸಿತು.
ಶುಕ್ರವಾರ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಯುಎಸ್ ನ ಅಭಿಗಿಲ್ ಸ್ಪೀಯರ್ಸ್ ಹಾಗೂ ಮೆಕ್ಸಿಕೋದದ ಸ್ಯಾಂಟಿಯಾಗೋ ಗೊನ್ಜಾಲೆಜ್ ಜೋಡಿಯನ್ನು 1-6,6-2,9-11 ರ ಅಂತರದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಬ್ರೆಜಿಲ್ಲಿನ ಬ್ರೂನೋ ಸೋರೆಸ್ ಜೋಡಿ ಮಣಿಸಿತು.
ಈ ಮುಂಚೆ 2009ರಲ್ಲಿ ಆಸ್ತ್ರೇಲಿಯನ್ ಓಪನ್ ಹಾಗೂ 2012ರಲ್ಲಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಗೆದ್ದಿರುವ ಮಿರ್ಜಾ ಅವರು ಮೂರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮುಂಚಿನ ಎರಡು ಪ್ರಶಸ್ತಿಗಳನ್ನು ಮಹೇಶ್ ಭೂಪತಿ ಜೋಡಿಯಲ್ಲಿ ಗೆದ್ದಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ ಮಿರ್ಜಾ-ಬ್ರೂನೋ ಜೋಡಿ ಶ್ರೇಯಾಂಕ ಪಡೆಯದ ಚೈನೀಸ್ ತೈಪೆ ಮತ್ತು ಇಂಗ್ಲೆಂಡ್‌ನ ವೈ.ಜೆ.ಚಾನ್ ಮತ್ತು ರಾಸ್ ಹಚಿನ್ಸ್ ಜೋಡಿಯನ್ನು 7-5, 4-6, 10-7 ಸೆಟ್‌ಗಳಿಂದ ಸೋಲಿಸಿತು. ಈ ಜೋಡಿ ಇದೇ ಮೊದಲ ಬಾರಿಗೆ ಗ್ರಾನ್‌ಸ್ಲ್ಯಾಮ್‌ನಲ್ಲಿ ಫೈನಲ್ ಪ್ರವೇಶಿಸಿ ಕಪ್ ಎತ್ತಿದೆ.
ಮಹಿಳಾ ಡಬಲ್ಸ್ ನಲ್ಲಿ ಸೋಲು: ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಶಿನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ.
ಲೂಯಿಸ್ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣದಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸ್ವಿಸ್ ಪುನರಾಗಮನ(17 ವರ್ಷಗಳ ನಂತರ ಅಂಗಳಕ್ಕಿಳಿದಿದ್ದಾರೆ) ರಾಣಿ ಮಾರ್ಟಿನಾ ಹಿಂಗಿಸ್ ಮತ್ತು ಇಟಾಲಿಯನ್ ಫ್ಲೇವಿಯಾ ಪೆನ್ನೆಟಾ ಜೋಡಿ, ಸಾನಿಯಾ ಜೋಡಿಯನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಶ್ರೇಯಾಂಕ ರಹಿತ ಜೋಡಿಯಾದ ಹಿಂಗಿಸ್ ಹಾಗೂ ಫ್ಲೇವಿಯಾ ಜೋಡಿ 2-6, 4-6 ಅಂತರದ ನೇರ ಸೆಟ್‌ಗಳಿಂದ ಒಂದು ಗಂಟೆ ಹತ್ತು ನಿಮಿಷಗಳಲ್ಲೇ ಸಾನಿಯಾ, ಕ್ಲಾರಾ ಜೋಡಿ ಮಣಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications