For Quick Alerts
ALLOW NOTIFICATIONS  
For Daily Alerts

10ನೇ ವಿಂಬಲ್ಡನ್ ಸೆಮಿಫೈನಲ್‌ಗೆ ಪ್ರವೇಶಿಸಿದ ನೊವಾಕ್ ಜೊಕೋವಿಕ್

Serbian Star Novak Djokovic into 10th Wimbledon semi-final

ಲಂಡನ್: ವಿಶ್ವ ನಂ.1 ಆಟಗಾರ, ವಿಂಬಲ್ಡನ್ ನಲ್ಲಿ 5 ಬಾರಿ ಚಾಂಪಿಯನ್ ಎನಿಸಿರುವ ಸರ್ಬಿಯನ್ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ 10ನೇ ಬಾರಿಗೆ ವಿಂಬಲ್ಡನ್ ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ (ಜುಲೈ 7) ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಹಂಗೆರಿಯ ಮಾರ್ಟನ್ ಫುಕ್ಸೊವಿಕ್ಸ್ ವಿರುದ್ಧ ನೇರಸೆಟ್ ಗೆಲುವು ದಾಖಲಿಸಿದ್ದಾರೆ.

20ನೇ ಗ್ರ್ಯಾಂಡ್‌ಸ್ಲ್ಯಾಮ್‌ ದಾಖಲೆ ನಿರ್ಮಿಸಲಿರುವ ನೊವಾಕ್ ಜೊಕೋವಿಕ್, ಕ್ವಾರ್ಟರ್ ಫೈನಲ್‌ನಲ್ಲಿ ಮಾರ್ಟನ್ ಫುಕ್ಸೊವಿಕ್ಸ್ ಅವರನ್ನು 6-3, 6-4, 6-4ರ ಅಂತರದಿಂದ ಸೋಲಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಜೊಕೋವಿಕ್ ಒಂದೋ ರಷ್ಯಾದ ಕರೆನ್ ಖಚನೋವ್ ಅವರನ್ನು ಅಥವಾ ಕೆನಡಾದ ಡೆನಿಸ್ ಶಪೋವೊಲೊವ್ ಅವರನ್ನು ಎದುರುಗೊಳ್ಳಲಿದ್ದಾರೆ.

ಸೆಮಿಫೈನಲ್‌ನಲ್ಲಿ ಜೊಕೋವಿಕ್ ಗೆದ್ದರೆ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳಲಿದ್ದಾರೆ. 34ರ ಹರೆಯದ ಜೊಕೋವಿಕ್ ಈ ಗೆಲುವಿನೊಂದಿಗೆ ಗ್ರಾಸ್‌ ಕೋರ್ಟ್‌ನಲ್ಲಿ 100ನೇ ಗೆಲುವು ದಾಖಲಿಸಿದ್ದಾರೆ. ಅಲ್ಲದೆ, ಇದು 41ನೇ ಬಾರಿಗೆ ಪ್ರಮುಖ ಟೂರ್ನಿಯೊಂದರಲ್ಲಿ ಕೊನೇ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಟೆನಿಸ್‌ನಲ್ಲಿ ನಾಲ್ಕು ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಕೇವಲ ಮೂರನೇ ಆಟಗಾರ ನೊವಾಕ್ ಜೊಕೋವಿಕ್. ಕಳೆ ತಿಂಗಳು ಫ್ರೆಂಚ್ ಓಪನ್‌ನಲ್ಲಿ ಗೆಲ್ಲುವ ಮೂಲಕ ಜೊಕೋವಿಕ್ ಈ ದಾಖಲೆ ನಿರ್ಮಿಸಿದ್ದರು.

Story first published: Wednesday, July 7, 2021, 21:37 [IST]
Other articles published on Jul 7, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+