ಅಕ್ಕ ವೀನಸ್ ವಿಲಿಯಮ್ಸ್‌ಗೆ ಸೋಲುಣಿಸಿದ ಸೆರೆನಾ ವಿಲಿಯಮ್ಸ್

ಲೆಕ್ಸಿಂಗ್ಟನ್, ಆಗಸ್ಟ್ 14: ಯುಎಸ್ ಸ್ಟೇಟ್‌ನ ಕೆಂಟುಕಿಯ ಲೆಕ್ಸಿಂಗ್ಟನ್‌ನಲ್ಲಿ ನಡೆದ ಟಾಪ್ ಸೀಡ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ರೋಚಕ ಪಂದ್ಯದಲ್ಲಿ ಅಮೆರಿಕಾದ ವೀನಸ್ ವಿಲಿಯಮ್ಸ್ ಅವರನ್ನು ಅವರ ಸಹೋದರಿ ಸೆರೆನಾ ವಿಲಿಯಮ್ಸ್ ಸೋಲಿಸಿದ್ದಾರೆ.
ಗುರುವಾರ (ಆಗಸ್ಟ್ 13) ನಡೆದ ಪಂದ್ಯದಲ್ಲಿ ತಂಗಿ ಸೆರೆನಾ ವಿಲಿಯಮ್ಸ್, ಅಕ್ಕ ವೀನಸ್ ವಿಲಿಯಮ್ಸ್ ಅವರನ್ನು 3-6, 6-3, 6-4ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಸೆರೆನಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಸೆರೆನಾ ಅವರು ಶೆಲ್ಬಿ ರೋಜರ್ಸ್ ಸವಾಲು ಸ್ವೀಕರಿಸಲಿದ್ದಾರೆ.
40ರ ಹರೆಯದ ವೀನಸ್ ಮತ್ತು 38ರ ಹರೆಯದ ಸೆರೆನಾ ನಡುವಿನ ಕಾದಾಟ ಟೆನಿಸ್ ಪ್ರೇಮಿಗಳ ಕುತೂಹಲ ಕೆರಳಿಸಿತ್ತು. ಇದು 31ನೇ ಬಾರಿಗೆ ಸಹೋದರಿಯರು ಮುಖಾಮುಖಿಯಾಗಿದ್ದರು. ಇದರಲ್ಲಿ ಸೆರೆನಾ 19 ಬಾರಿ ಗೆದ್ದಿದ್ದರೆ, 12 ಬಾರಿ ವೀನಸ್ ಗೆದ್ದಂತಾಗಿದೆ.
ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ನಡುವಿನ ಮೊದಲ ಕದನ ನಡೆದು ಇಂದಿಗೆ 22 ವರ್ಷಗಳಾಗಿವೆ. ಇಬ್ಬರೂ ಒಟ್ಟಿಗೆ 30 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ. ಸೆರೆನಾ 23 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಜಯಿಸಿದ್ದರೆ, ವೀನಸ್ 7 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications