ಯುಎಸ್ ಓಪನ್: ಸೆರೆನಾ ವಿಲಿಯಮ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ನ್ಯೂಯಾರ್ಕ್: 6 ಬಾರಿಯ ಚಾಂಪಿಯನ್ ಅಮೆರಿಕಾದ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದವರೇ ಆದ ಸ್ಲೋಯೆನ್ ಸ್ಟೀಫನ್ಸ್ ಅವರನ್ನು ಸೋಲಿಸಿ ಸೆರೆನಾ ಮುನ್ನಡೆ ಸಾಧಿಸಿದ್ದಾರೆ.
ಮೂರನೇ ಶ್ರೇಯಾಂಕಿತೆ ಸೆರೆನಾ ಭಾನುವಾರ (ಸೆಪ್ಟೆಂಬರ್ 6) ನಡೆದ ಪಂದ್ಯದಲ್ಲಿ 26ನೇ ಶ್ರೇಯಾಂಕಿತೆ ಸ್ಲೋಯೆನ್ ಸ್ಟೀಫನ್ಸ್ ಅವರನ್ನು 2-6, 6-2, 6-2ರ ಅಂತರದಿಂದ ಸೋಲಿಸಿದರು. ಆರಂಭಿಕ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಸೆರೆನಾ ಅನಂತರದ ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು.
24ನೇ ಗ್ರ್ಯಾಂಡ್‌ಸ್ಲ್ಯಾಮ್ ದಾಖಲೆ ನಿರ್ಮಿಸಲು ಎದುರು ನೋಡುತ್ತಿರುವ 38ರ ಹರೆಯದ ಸೆರೆನಾ ಮುಂದಿನ ಸುತ್ತಿನಲ್ಲಿ 15ನೇ ಶ್ರೇಯಾಂಕದ ಮಾರಿಯಾ ಸಕ್ಕಾರಿ ಸವಾಲು ಸ್ವೀಕರಿಸಲಿದ್ದಾರೆ. ಇದೇ ಸಕ್ಕಾರಿ ಕಳೆದ ವಾರ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್‌ನಲ್ಲಿ ಸೆರೆನಾ ಅವರನ್ನು ಸೋಲಿಸಿದ್ದರು.
Story first published: Monday, September 7, 2020, 10:05 [IST]
Other articles published on Sep 7, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications