For Quick Alerts
ALLOW NOTIFICATIONS  
For Daily Alerts

ಮತ್ತೆ ಟೆನಿಸ್ ಕೋರ್ಟ್ ಗೆ ಇಳಿದ ಏಳು ತಿಂಗಳ ಗರ್ಭಿಣಿ ಸಾನಿಯಾ!

Seven months pregnant Sania Mirza practising tennis with her sister

ನವದೆಹಲಿ, ಆಗಸ್ಟ್ 9: ಟೆನಿಸ್ ಕೋರ್ಟ್ ನಲ್ಲಿ ಸ್ಟಾರ್ ಆಟಗಾರ್ತಿಯಾಗಿ ಮಿಂಚಿದ್ದ ಭಾರತದ ಸಾನಿಯಾ ಮಿರ್ಜಾ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಟೆನಿಸ್ ಕೋರ್ಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಟೆನಿಸ್ ಕೋರ್ಟ್ ನಲ್ಲಿ ಸಾನಿಯಾ ಸೌಹಾರ್ದ ಪಂದ್ಯವನ್ನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕ್ರೀಡೆಯನ್ನು ನೆಚ್ಚಿಕೊಂಡ ಯಾರಿಗೂ ಅದರೆಡೆಗಿನ ಸೆಳೆತ ಇದ್ದಿದ್ದೇ. ಸಾನಿಯಾ ಕತೆಯೂ ಹೀಗೆಯೆ. ತನ್ನ ಚೊಚ್ಚಲ ಮಗುವಿಗಾಗಿ ಮುಂದೆ ನೋಡುತ್ತಿರುವ ಟೆನಿಸ್ ಡಬಲ್ಸ್ ನ ಮಾಜಿ ವಿಶ್ವ ನಂ. 1 ಆಟಗಾರ್ತಿ ಸಾನಿಯಾ ಮತ್ತೆ ಟೆನಿಸ್ ಕೋರ್ಟ್ ಗೆ ಇಳಿದಿದ್ದಾರೆ. ತನ್ನ ಸಹೋದರಿಯೊಂದಿಗೆ ಸೌಹಾರ್ದ ಪಂದ್ಯವನ್ನು ಆಡಿದ್ದಾರೆ. ಸಾನಿಯಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿರುವ ಈ ವಿಡಿಯೋ ಈಗ ಭರ್ಜರಿ ವೀಕ್ಷಣೆಗೆ ಒಳಪಡುತ್ತಿದೆ.

ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರನ್ನು ವರಿಸಿರುವ ಸಾನಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಳು ತಿಂಗಳ ಗರ್ಭಿಣಿ ಸಾನಿಯಾಗೆ ವೈದ್ಯರು ಚಟುವಟಿಕೆಯಿಂದಿರಲು ಸೂಚಿಸಿರುವುದರಿಂದ ಮತ್ತೆ ಟೆನಿಸ್ ರ್ಯಾಕೆಟ್ ಕೈಗೆತ್ತಿಕೊಂಡಿದ್ದಾರೆ. ಆದರೆ ದೇಹಕ್ಕೆ ಹೆಚ್ಚು ಆಯಾಸವಾಗದಂತೆ, ಹೆಚ್ಚು ಶ್ರಮ ಬೀಳದಂತೆ ಮೆದುವಾಗಿ ಪಂದ್ಯವನ್ನಾಡುವ ಮೂಲಕ ಟೆನಿಸ್ ಮೇಲಿರುವ ತನಗಿರುವ ಪ್ರೀತಿಯನ್ನು ಸಾನಿಯಾ ತೋರಿಕೊಂಡಿದ್ದಾರೆ.

Story first published: Thursday, August 16, 2018, 13:09 [IST]
Other articles published on Aug 16, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+