ಆಸ್ಟ್ರೇಲಿಯನ್ ಓಪನ್ ನಿಂದ ಮರಿಯಾ ಶರಪೋವಾ ಔಟ್ !

ಮೆಲ್ಬರ್ನ್, ಜನವರಿ 20 : 2008ರ ಚಾಂಪಿಯನ್ ಮರಿಯಾ ಶರಪೋವಾ ಅವರು ಸ್ಥಳೀಯ ಆಟಗಾರ್ತಿ ಆಶ್ ಬಾರ್ಟಿ ಅವರ ವಿರುದ್ಧ ಭಾನುವಾರ(ಜನವರಿ 20) ದಂದು ಸೋಲು ಕಂಡಿದ್ದಾರೆ.
ಶುಕ್ರವಾರದಂದು ಕರೊಲಿನೆ ವೊಜ್ನಿಯಾಸ್ಕಿ ಪ್ರಶಸ್ತಿ ಉಳಿಸಿಕೊಳ್ಳುವ ಕನಸನ್ನು ಶರಪೋವಾ ಭಗ್ನಗೊಳಿಸಿದ್ದರು. ಆದರೆ, ಐದು ಬಾರಿ ಗ್ರ್ಯಾನ್ ಸ್ಲಾಮ್ ವಿಜೇತೆ, ಮಾಜಿ ವಿಶ್ವದ ನಂ.1 ಮರಿಯಾ ಅವರು 4-6, 6-1, 6-4ರಲ್ಲಿ 15ನೇ ಸೀಡ್ ನ ಬಾರ್ಟಿ ವಿರುದ್ಧ ರಾಡ್ ಲವೇರ್ ಅರೇನಾದಲ್ಲಿ ಸೋಲು ಕಂಡಿದ್ದಾರೆ.
ಬಾರ್ಟಿ ವಿರುದ್ಧದ ಕಳೆದ 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಮರಿಯಾ ಗೆದ್ದುಕೊಂಡಿದ್ದರು. ಬಾರ್ಟಿ ಅವರು ಮುಂದಿನ ಹಂತದಲ್ಲಿ ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅವರನ್ನು ಎದುರಿಸಲಿದ್ದಾರೆ.

ವಿಶ್ವದ ನಂ ಹಾಗೂ ಸ್ಪೇನಿನ ಸ್ಟಾರ್ ನಡಾಲ್ ಅವರು ಬೆರ್ಡಿಕ್ ಅವರನ್ನು 6-0, 6-1, 7-6 (7-4) ಮೆಲ್ಬೋರ್ನ್ ನಲ್ಲಿ ಎರಡು ಗಂಟೆಗಳ ಹೋರಾಟದಲ್ಲಿ ಸುಲಭವಾಗಿ ಸೋಲಿಸಿದರು. 11ನೇ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯವಾಡುತ್ತಿರುವ 17 ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ನಡಾಲ್ ಅವರು ಸೆಮಿಫೈನಲ್ ಹಂತದಲ್ಲಿ ಫ್ರಾನ್ಸಸ್ ಟಿಯಾಫೋ ಅವರನ್ನು ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications