ಟೆನಿಸ್: ಇಟಾಲಿಯನ್ ಓಪನ್‌ನಿಂದ ಹಿಂದೆ ಸರಿದ ಮರಿಯಾ ಶರಪೋವಾ

ರೋಮ್, ಮೇ 02: ಭುಜದ ನೋವಿನ ಸಮಸ್ಯೆಯಿಂದ ಇನ್ನು ಚೇತರಿಸಿದ ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ, ಇಲ್ಲಿ ನಡೆಯಲಿರುವ ರೋಮ್ ಮಾಸ್ಟರ್ಸ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಸ್ಪರ್ಧೆಯಿಂದಲೂ ಹಿಂದೆ ಸರಿದಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ನಡೆದ ಸೇಂಟ್ ಪೀಟರ್ಸ್‌ಬರ್ಗ್ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನ ಗೆಲುವಿನ ಬಳಿಕ ಸ್ಪರ್ಧೆಯಿಂದ ನಿವೃತ್ತಿ ಹೊಂದಿದ್ದ 32 ವರ್ಷದ ಆಟಗಾರ್ತಿ ಮರಿಯಾ, ಬಳಿಕ ಈವರೆಗೆ ಯಾವುದೇ ಟೂರ್ನಿಗಳಲ್ಲಿ ಆಡಿಲ್ಲ.
2018ರ ಅಂತ್ಯದ ಹೊತ್ತಿಗೆ ಭುಜದ ನೋವಿನ ಸಮಸ್ಯೆ ಎದುರಾಯಿತು ಎಂದು ಶರಪೋವಾ ಹೇಳಿಕೊಂಡಿದ್ದಾರೆ. ಇದರೊಂದಿಗೆ ಇದೇ ತಿಂಗಳ ಅಂತ್ಯದ ಹೊತ್ತಿಗೆ ನಡೆಯಲಿರುವ ವರ್ಷದ ಎರಡನೇ ಗ್ರ್ಯಾನ್ ಸ್ಮ್ಯಾಮ್ ಟೆನಿಸ್ ಟೂರ್ನಿ ಫ್ರೆಂಚ್ ಓಪನ್‌ನಲ್ಲೂ ಶರಪೋವಾ ಆಡುವುದು ಅನುಮಾನವಾಗಿದೆ.
ಸೇಂಟ್ ಪೀಟರ್ಸ್‌ಬರ್ಗ್ ಬಳಿಕ ಸ್ಟಟ್‌ಗಾರ್ಟ್ ಓಪನ್, ಮ್ಯಾಡ್ರಿಡ್ ಓಪನ್ ಮತ್ತು ಇದೀಗ ರೋಮ್ ಮಾಸ್ಟರ್ಸ್‌ನಿಂದಲೂ 5 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಹಾಗೂ ವಿಶ್ವದ 28ನೇ ಶ್ರೇಯಾಂಕ ಹೊಂದಿರುವ ಶರಪೋವಾ ಹಿಂದೆ ಸರಿದಿದ್ದಾರೆ.
ಕಳೆದ ವರ್ಷ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯ ಕ್ವಾರ್ಟರ್‌ಫೈನಲ್ಸ್ ತಲುಪಿದ್ದ ಶರಪೋವಾ, ಸ್ಪೇನ್‌ನ ಆಟಗಾರ್ತಿ ಗಾರ್ಬಿನಿಯಾ ಮುಗುರುಜಾ ವಿರುದ್ಧ ನಿರಾಸೆ ಅನುಭವಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications