Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭೂಪತಿ ಅವರ ಸ್ಫೋರ್ಟ್ಸ್ 365 ಇಂದ ಹೊಸ ಕ್ರೀಡಾ ವೆಬ್ ಸೈಟ್

ಬೆಂಗಳೂರು, ಡಿ.02: ಸ್ಫೋರ್ಟ್ಸ್ 365, ಭಾರತದ ಅಗ್ರಗಣ್ಯ ಸಂಪೂರ್ಣ ಆನ್ ಲೈನ್ ಕ್ರೀಡಾ ಮಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಕ್ಷಿಪ್ರವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಬಹಿರಂಗಪಡಿಸದ ಮೊತ್ತಕ್ಕೆ ಟೆನಿಸ್ ಹಬ್ ಡಾಟ್ (Tennishub.in) ಸ್ವಾಧೀನವನ್ನು ಘೋಷಿಸಿದೆ. ಟೆನಿಸ್ ತಾರೆ ಮಹೇಶ್ ಭೂಪತಿ ಅವರು ರಾಯಭಾರಿಯಾಗಿರುವ ಈ ಸಂಸ್ಥೆ ಓಟಗಾರರಿಗಾಗಿ ಪ್ರತ್ಯೇಕ ವೆಬ್ ಸೈಟ್ ಬಿಡುಗಡೆ ಮಾಡಿದೆ.

ಟೆನಿಸ್ ಹಬ್ ಡಾಟ್ ಇನ್ ಒಂದು ವಿಶಿಷ್ಟ ಆನ್ ಲೈನ್ ಟೆನಿಸ್ ಮಳಿಗೆಯಾಗಿದ್ದು, ಟಿನಿಸ್ ಆಟಗಾರ ಮತ್ತು ಒಲಿಂಪಿಯನ್ ವಿಷ್ಣುವರ್ಧನ್ ಮತ್ತು ಕ್ರೀಡಾ ಉದ್ಯಮಿ ಅಫ್ರೋಝ್ ಖಾನ್ ಅವರು ಸಂಸ್ಥಾಪಿಸಿದ್ದಾರೆ. ಟೆನಿಸ್ ಹಬ್ ನ ಸಂಪೂರ್ಣ ತಂಡವು ಸ್ಫೋರ್ಟ್ಸ್ 365ನೊಂದಿಗೆ ಸೇರ್ಪಡೆಗೊಳ್ಳಲಿದೆ. ಮತ್ತು ವ್ಯವಹಾರವನ್ನು ಮುಂದುವರಿಸಲಿದೆ.

Sports365 buys Tennishub

ಇದರೊಂದಿಗೆ ಸ್ಫೋರ್ಟ್ಸ್ 365 ಓಟಗಾರರಿಗೆ ಅಗತ್ಯಗಳನ್ನು ಪೂರೈಸುವ ವಿಶಿಷ್ಟ ರನ್ನಿಂಗ್ ಹಬ್ ಡಾಟ್ ಇನ್ (Runninghub.in) ಎಂಬ ಹೊಸ ಪೋರ್ಟಲ್ ಗೆ ಚಾಲನೆ ನೀಡಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇದರ ನಿರ್ದೇಶಕರಾದ ಮಹೇಶ್ ಭೂಪತಿ ಅವರು ವಹಿಸಿದ್ದರು. ಓಟದ ಟಾಪ್ ಉತ್ಪನ್ನಗಳ ವಿಶಾಲ ಆಯ್ಕೆಯನ್ನು ಒದಗಿಸುವುದಷ್ಟೇ ಅಲ್ಲದೆ, ಓಟಗಾರರ ಜ್ಞಾನ, ವಿಷಯ ಮತ್ತು ತಜ್ಞತೆಯನ್ನು ಹಂಚಿಕೊಳ್ಳಲು ಒಂದು ಅದ್ಭುತ ತಾಣವನ್ನೂ ಇದು ಒದಗಿಸಲಿದೆ.

ಟೆನಿಸ್ ಹಬ್ ಡಾಟ್ ಇನ್ ಒಂದು ವಿಶಿಷ್ಟ ಆನ್ ಲೈನ್ ಟೆನಿಸ್ ಮಳಿಗೆಯಾಗಿದ್ದು, ಕೇವಲ 3 ವರ್ಷಗಳ ಸಣ್ಣ ಅವಧಿಯಲ್ಲೇ ಇದೊಂದು ಸಮಗ್ರ ಸಂಗ್ರಹ, ಉತ್ಕೃಷ್ಟ ಗ್ರಾಹಕ ಅನುಭ ಮತ್ತು ಕೈಗೆಟಕುವ ಬೆಲೆಗಳ ಮೂಲಕ ಅಪೇಕ್ಷಣೀಯ ಬ್ರಾಂಡ್ ಅನ್ನು ನಿರ್ಮಿಸಿತು. ಟೆನಿಸ್ ಹಬ್ ಡಾಟ್ ಇನ್ ಮತ್ತು ಸ್ಫೋರ್ಟ್ಸ್ 365ನ ಕೂಡಿಕೆಯ ಒಡಂಬಡಿಕೆಗಳು ಏಕೀಕೃತ ಘಟಕವಾಗಿದ್ದುಕೊಂಡು ಭಾರತದ ಗ್ರಾಹಕರಿಗೆ ಸುಗಮ ಮತ್ತು ವರ್ಧಿತ ಕ್ರೀಡಾ ಶಾಪಿಂಗ್ ಅನುಭವವನ್ನು ಒದಗಿಸಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್, ಸಿಇಒ ಸ್ಫೋರ್ಟ್ಸ್ 365, ಟೆನಿಸ್ ಹಬ್ ಡಾಟ್ ಇನ್ ಸ್ವಾಧೀನವು ಸ್ಫೋರ್ಟ್ಸ್ 365 ಅನ್ನು ಕ್ರೀಡೆ ಮತ್ತು ಫಿಟ್ನೆಸ್ ಕೇಂದ್ರಿತ ವಿಶ್ವದರ್ಜೆಯ ಆನ್ ಲೈನ್ ತಾಣವನ್ನಾಗಿಸುವ ದೂರದೃಷ್ಟಿಯನ್ನು ನನಸಾಗಿಸುವುದಕ್ಕೆ ನೆರವಾಗಲಿದೆ. ಜಾಗತಿಕವಾಗಿ ಯಶಸ್ವಿ ಕ್ರೀಡಾ ಕಂಪನಿಗಳು ಬೆಳೆದ ಹಾದಿಯಲ್ಲೇ ಇದು ಸಾಗಲಿದೆ.

Sports365 buys Tennishub


ರನ್ನಿಂಗ್ ಹಬ್ ಡಾಟ್ ಇನ್ : ಇನ್ನೊಂದೆಡೆ ಓಟದ ಆಸಕ್ತರಿಗಾಗಿಯೇ ಸೇವೆ ಸಲ್ಲಿಸಲಿದೆ. ಇದು ಓಟದ ಶೂಗಳು, ಅಪಾರೆಲ್, ರನ್ನಿಂಗ್ ಗೇರ್ ಮತ್ತು ಪೋಷಕಾಂಶಗಳ ಸಂಬಂಧಿತ ಉತ್ಪನ್ನಗಳ ಉತ್ತಮ ಮೇಲ್ವಿಚಾರಣೆಯ ಆಯ್ಕೆಯನ್ನು ಒದಗಿಸಲಿದೆ. ಎಲ್ಲಾ ಓಟದ ಬ್ರಾಂಡ್ ಗಳ 1,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಆಯ್ಕೆ ಮಾಡಬಹುದಾಗಿದ್ದು, ಇದು ಕೈಗೆಟಕುವ ಬೆಲೆಗಳಲ್ಲಿ ಈ ಕ್ಷೇತ್ರದ ವಿಶಾಲ ಶ್ರೇಣಿಯ ಉತ್ಪನ್ನಗಳನ್ನು ನೀಡಲಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+