For Quick Alerts
ALLOW NOTIFICATIONS  
For Daily Alerts

ಬಂಜ ಲುಕಾ ಚಾಲೆಂಜರ್: ಫೈನಲ್‌ಗೆ ಪ್ರವೇಶಿಸಿದ ಸುಮಿತ್ ನಗಾಲ್

Sumit Nagal enters final of Banja Luka Challenger

ಬಂಜ ಲುಕಾ, ಸೆಪ್ಟೆಂಬರ್ 14: ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಬಂಜ ಲುಕಾದಲ್ಲಿ ನಡೆಯುತ್ತಿರುವ ಟೆನಿಸ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ ಸುಮಿತ್ ನಗಾಲ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಫಿಲಿಪ್ ಹೊರನ್‌ಸ್ಕೈ ಹಿಮ್ಮೆಟ್ಟಿಸಿ ನಗಾಲ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಈ ಟೂರ್ನಿಯ ಸೆಮಿಫೈನಲ್ ಗೆಲುವಿನೊಂದಿಗೆ ಸುಮಿತ್ ಟೆನಿಸ್‌ನಲ್ಲಿ ಜೀವನಶ್ರೇಷ್ಠ 174ನೇ ಶ್ರೇಯಾಂಕಕ್ಕೆ ಜಿಗಿತ ಕಂಡಿದ್ದಾರೆ. ಶನಿವಾರ (ಸೆಪ್ಟೆಂಬರ್ 14) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ಲೊವಾಕಿಯಾದ ಹೊರನ್‌ಸ್ಕೈ ಅವರಿಗೆ ಸುಮಿತ್, 7-6 (1) 6-2ರ ಸೋಲುಣಿಸಿದರು. ಇಬ್ಬರ ಮಧ್ಯೆ 44 ನಿಮಿಷಗಳ ಕಾದಾಟ ನಡೆಯಿತು.

ಬೆಂಗಳೂರಿನಲ್ಲಿ 2017ರ ನವೆಂಬರ್‌ನಲ್ಲಿ ನಡೆದಿದ್ದ ಎಟಿಪಿ ಚಾಲೆಂಜರ್ ಟೂರ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ, ಸುಮಿತ್ ನಗಾಲ್ ಪ್ರವೇಶಿಸಿರುವ ಮೊದಲ ಅಟಿಪಿ ಚಾಲೆಂಜರ್ ಟೂರ್ ಟೂರ್ನಿಯಿದು. ಫೈನಲ್‌ನಲ್ಲಿ ನಗಾಲ್, ನೆದರ್ಲ್ಯಾಂಡ್‌ನ ಟ್ಯಾಲನ್ ಗ್ರೀಕ್‌ಸ್ಪೂರ್‌ ಸವಾಲು ಸ್ವೀಕರಿಸಲಿದ್ದಾರೆ. ಫೈನಲ್ ಪಂದ್ಯ ಸೆಪ್ಟೆಂಬರ್ 15ರ ಭಾನುವಾರ ನಡೆಯಲಿದೆ.

Story first published: Saturday, September 14, 2019, 22:09 [IST]
Other articles published on Sep 14, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+