Nordea Open Tennis 2024: ನಾರ್ಡಿಯಾ ಓಪನ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ ಸುಮಿತ್ ನಾಗಲ್
ಜುಲೈ 16 ಮಂಗಳವಾರ, ಸ್ವೀಡನ್‌ನ ಬಸ್ಟಾಡ್‌ನಲ್ಲಿ ನಡೆಯುತ್ತಿರುವ ನಾರ್ಡಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ ಸುಮಿತ್ ನಗಾಲ್ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
ಸುಮಿತ್ ನಾಗಾಲ್ ಅಂತಿಮವಾಗಿ ಸ್ವೀಡಿಷ್ ಆಟಗಾರ ಎಲಿಯಾಸ್ ಯೆಮರ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಯಾಮರ್ ವಿರುದ್ಧ ಆಡಿದ್ದ ಎರಡು ಪಂದ್ಯಗಳಲ್ಲಿ ನಾಗಲ್ ಸೋಲನ್ನು ಎದುರಿಸಬೇಕಾಯಿತು.

ಆದರೆ ಇದೀಗ ನಾಗಲ್ ಅವರು ತಮ್ಮ ಅಮೋಘ ಫಾರ್ಮ್ ಮುಂದುವರಿಸಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಸ್ಥಳೀಯ ಆಟಗಾರ ಯೆಮರ್ ಅವರನ್ನು 6-4 6-3 ಅಂತರದಿಂದ ಸೋಲಿಸಿದ್ದಾರೆ.
ನಾಗಲ್ ಕಳೆದ ವರ್ಷ ಸ್ಪ್ಲಿಟ್ ಓಪನ್ (ಕ್ರೊಯೇಷಿಯಾ) ಮತ್ತು 2019ರಲ್ಲಿ ನಡೆದ ಲಿಯಾನ್ (ಫ್ರಾನ್ಸ್)ನಲ್ಲಿ ಯೆಮರ್ ವಿರುದ್ಧ ಸೋತಿದ್ದರು. ಎಟಿಪಿ ಶ್ರೇಯಾಂಕದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ 68 ನೇ ಸ್ಥಾನವನ್ನು ತಲುಪಿರುವ ನಾಗಲ್ ಈಗ ಅರ್ಜೆಂಟೀನಾದ ವಿಶ್ವದ 36ನೇ ಶ್ರೇಯಾಂಕದ ಮರಿಯಾನೊ ನವೊನ್ ಅವರನ್ನು ಎದುರಿಸಲಿದ್ದಾರೆ.
ಜುಲೈ 26 ರಿಂದ ಆರಂಭವಾಗುತ್ತಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಗಲ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 2020ರ ಟೋಕಿಯೊ ಕ್ರೀಡಾಕೂಟದ ನಂತರ ನಾಗಲ್ ಅವರ ಎರಡನೇ ಒಲಿಂಪಿಕ್ಸ್ ಪ್ರದರ್ಶನವನ್ನು ಇದಾಗಿದೆ.
ಟೋಕಿಯೋದಲ್ಲಿ ನಾಗಲ್ ಮೊದಲ ಸುತ್ತಿನಲ್ಲಿ ಡೆನಿಸ್ ಇಸ್ಟೊಮಿನ್ ಅವರನ್ನು ಸೋಲಿಸಿದರು. ಆದರೆ ಎರಡನೇ ಸುತ್ತಿನಲ್ಲಿ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಸೋಲು ಅನುಭವಸಿದ್ದರು.
ಮತ್ತೊಂದೆಡೆ ದಿಗ್ಗಜ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಎಟಿಪಿ ಟೂರ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಆಡಲು ಸಿದ್ಧರಾಗಿದ್ದಾರೆ. ಈ ಇಬ್ಬರೂ ಆಟಗಾರರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಹ್ಯಾಂಬರ್ಗ್ ಓಪನ್‌ನಲ್ಲಿ ಭಾರತದ ಈ ಜೋಡಿಯ ಮೊದಲ ಪಂದ್ಯವನ್ನು ಬುಧವಾರ ಜರ್ಮನಿಯ ಮಾರ್ಕ್ ವಾಲ್ನರ್ ಮತ್ತು ಜಾಕೋಬ್ ಶ್ನಾಟರ್ ವಿರುದ್ಧ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications