Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆನ್ಮಾರ್ಕ್‌ ಟೆನಿಸ್ ಸುಂದರಿಯ 'ಬಾಡಿ ಪೇಂಟಿಂಗ್' ಸ್ವಿಮ್ ಸೂಟ್ ಖುಲ್ಲಂಖುಲ್ಲಾ

Tennis Beauty Caroline Wozniacki Gets Body Painted For Sports Illustrated Swimsuit Issue

ಡೆನ್ಮಾರ್ಕ್‌ನ ಟೆನ್ನಿಸ್ ಸುಂದರಿ ಕ್ಯಾರೋಲಿನ್ ವೋಜ್ನಿಯಾಕಿ 2018ರಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿ ಮೆರೆದಾಕೆ. ಆದರೆ 2020ರ ಮೊದಲ ಗ್ರ್ಯಾಂಡ್‌ಸ್ಲಮ್‌ನಲ್ಲಿ ಭಾಗವಹಿಸಿದ ನಂತರ ಜನವರಿ 24ರಂದು ದಿಢೀರ್ ಆಗಿ ನಿವೃತ್ತಿ ಘೋಷಿಸಿ ಟೆನ್ನಿಸ್ ಪ್ರೇಮಿಗಳಿಗೆ ಆಘಾತ ನೀಡಿದರು. ನಿವೃತ್ತಿಯ ಬಳಿಕ ವೋಜ್ನಿಯಾಕಿ ಮತ್ತೆ ಬೇರೆಯದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಅಮೆರಿಕಾದ 'ಸ್ಪೋರ್ಟ್ಸ್ ಇಲ್ಯುಸ್ಟ್ರೇಟೆಡ್ ಸ್ವಿಮ್ ಸೂಟ್' ನಿಯತಕಾಲಿಕೆಗಾಗಿ 29 ವರ್ಷದ ಈ ಮಾಜಿ ಟೆನ್ನಿಸ್ ಆಟಗಾರ್ತಿ 'ಬಾಡಿ ಪೈಂಟಿಂಗ್' ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. 15 ಗಂಟೆಗೂ ಅಧಿಕ ಸಮಯದಲ್ಲಿ ದೇಹಕ್ಕೆ ಬಣ್ಣ ಬಳಿದುಕೊಂಡು ಮಾದಕವಾಗಿ ಕಾಣಿಸಿಕೊಂಡಿದ್ದಾರೆ ಕ್ಯಾರೋಲಿನ್ ವೋಜ್ನಿಯಾಕಿ.

ಅಮೆರಿಕಾದ ಸೇಂಟ್ ವಿನ್ಸೆಂಟ್‌ನ ಸುಂದರವಾದ ಬೀಚ್‌ನಲ್ಲಿ ಬಾಡಿ ಪೈಂಟಿಂಗ್‌ನಲ್ಲಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ ಕ್ಯಾರೋಲಿನ್. ಛಾಯಾಗ್ರಾಹಕ ಫ್ರೆಡೆರಿಕ್ ಫಿನೆಟ್ ಟೆನಿಸ್ ಅಂಗಳದ ಸುಂದರಿಯ ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆಹಿಡಿದಿದ್ದಾರೆ.

ಡ್ಯಾನಿಶ್‌ನ ಈ ಟೆನ್ನಿಸ್ ಸುಂದರಿ ಅಂಗಳದಲ್ಲಿನ ಅದ್ಭುತ ಆಟದಿಂದಾಗಿ ಮಾತ್ರವೇ ಖ್ಯಾತಿಯನ್ನು ಪಡೆದುಕೊಂಡಿಲ್ಲ. ಆಕೆಯ ಅಪ್ರತಿಮ ಸೌಂದರ್ಯದಿಂದಲೂ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲೂ ಕ್ಯಾರೋಲಿನ್ ವೋಜ್ನಿಯಾಕಿ ಮಿಂಚಿದ್ದಾರೆ. ಟೆನ್ನಿಸ್‌ನಲ್ಲಿ ನಿವೃತ್ತಿಯನ್ನು ಪಡೆದ ನಂತರ ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ.

ಟೆನ್ನಿಸ್‌ನ ವಾಹಿನಿಯೊಂದಕ್ಕೆ ಇತ್ತೀಚೆಗೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ಕ್ಯಾರೋಲಿನ್ ವೋಜ್ನಿಯಾಕಿ ಡಬಲ್ಸ್ ಮೂಲಕ ಮತ್ತೆ ಟೆನ್ನಿಸ್ ಅಂಗಳಕ್ಕೆ ಮರಳುವ ಸುಳಿವನ್ನು ನೀಡಿದ್ದರು. "ಡಬಲ್ಸ್‌ನ ಜೊತೆಗಾರ್ತಿಯಾಗಿರುವ ಸೆರೆನಾ ವಿಲಿಯಮ್ಸ್ ಬಯಸಿದರೆ ಮತ್ತೆ ಕೆಲ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು" ಎಂದು ಹೇಳಿದ್ದರು.

Story first published: Monday, June 1, 2020, 17:14 [IST]
Other articles published on Jun 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+