Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ ಚಿತ್ರಗಳು: ರಾಜ,ರಾಣಿ, ರೋಜರ್, ರಾಕೆಟ್

ಲಂಡನ್, ಜು.8: ಆಲ್ ಇಂಗ್ಲೆಂಡ್ ಕ್ಲಬಿನ ಹಸಿರು ಹುಲ್ಲು ಹಾಸಿನ ಮೇಲೆ ಅಚ್ಚ ಬಿಳಿಪು, ಸ್ವಚ್ಛ ಬಿಳಿಪಿನ ಉಡುಗೆ ತೊಟ್ಟ ಟೆನಿಸ್ ಪಟುಗಳ ಆರ್ಭಟ ಮುಕ್ತಾಯ ಕಂಡಿದೆ. ಬಹುತೇಕ ನಿರೀಕ್ಷೆಯಂತೆ ಸ್ಟಾರ್ ಆಟಗಾರರು ಪ್ರದರ್ಶನ ನೀಡಿದರೆ, ಈ ಬಾರಿ ಪುರುಷರ ಸಿಂಗಲ್ಸ್ ರೋಚಕತೆ, ಮಹಿಳೆಯರ್ ಸಿಂಗಲ್ಸ್ ಫೈನಲ್ ನಲ್ಲಿ ಸೋತ ಟೂರ್ನಿಯ ಶೋಧ ಬೌಶರ್ಡ್‌ ಸಾಧನೆ ಗಮನ ಸೆಳೆಯಿತು.

ಸೆರ್ಬಿಯಾದ ನೊವಾಕ್‌ ಜೊಕೋವಿಕ್‌ ಕಳೆದ ಬಾರಿ ಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳಲು ಕಾದಿದ್ದರೆ 77 ವರ್ಷಗಳ ನಂತರ ಕಪ್ ಎತ್ತಿದ್ದ ಸ್ಥಳೀಯ ಆಟಗಾರ ಮರೆ ಸೆಮಿ ಫೈನಲ್ ಕೂಡಾ ತಲುಪಲಿಲ್ಲ. ನೊವಾಕ್ ಆರ್ಭಟವನ್ನು ಸ್ವಿಸ್ ರಾಜಕುಮಾರ 'ರೋಜರ್' ತಡೆಗಟ್ಟಲು ಯತ್ನಿಸಿದ್ದು ರೋಚಕವಾಗಿತ್ತು ಆದ್ರೆ, ಅಂತಿಮವಾಗಿ ಸೆರ್ಬಿಯಾದ ಜೊಕೋವಿಕ್ ಗೆ ಎರಡನೇ ಕಪ್ ಸಿಕ್ಕಿತು.[ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ]

ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ 6-3, 6-0 ಸೆಟ್‌ಗಳ ಅಂತರದಿಂದ ಕೆನಡಾದ ಯೂಜಿನಿ ಬೌಶರ್ಡ್‌ ಅವರನ್ನು ಮಣಿಸಿ 2ನೇ ಬಾರಿಗೆ ವಿಂಬಲ್ಡನ್‌ ಕಿರೀಟ ಮುಡಿಗೇರಿಸಿಕೊಂಡರು. ಟೂರ್ನಿಯ ಫೇವರೀಟ್ ಎನಿಸಿದ್ದ ಮರಿಯಾ ಶರಪೋವಾ ನನಗೆ ಸಚಿನ್ ಯಾರು ಗೊತ್ತಿಲ್ಲ ಎಂದಿದ್ದು ದೊಡ್ಡ ಸುದ್ದಿಯಾಯ್ತು. ಟೂರ್ನಿಯ ರಸನಿಮಿಷಗಳ ಚಿತ್ರಾವಳಿ ನಿಮ್ಮ ಮುಂದಿದೆ..

ಕೋಚ್ ಬೊರಿಸ್ ಬೆಕರ್ ಜತೆ ವಿಂಬಲ್ಡನ್ ರಾಜ

ಕೋಚ್ ಬೊರಿಸ್ ಬೆಕರ್ ಜತೆ ವಿಂಬಲ್ಡನ್ ರಾಜ

ಕೋಚ್ ಬೊರಿಸ್ ಬೆಕರ್ ಜತೆ ವಿಂಬಲ್ಡನ್ ರಾಜ ನೊವಾಕ್ ಜೊಕೊವಿಕ್ ಗೆಲುವಿನ ಆರ್ಭಟ AP/ PTI

ಟ್ರೋಫಿ ಜತೆಗೆ ವಿಂಬಲ್ಡನ್ ಹೊಸ ಕಿಂಗ್

ಟ್ರೋಫಿ ಜತೆಗೆ ವಿಂಬಲ್ಡನ್ ಹೊಸ ಕಿಂಗ್

ಟ್ರೋಫಿ ಜತೆಗೆ ವಿಂಬಲ್ಡನ್ ಹೊಸ ಕಿಂಗ್ ನೊವಾಕ್ ಜೊಕೊವಿಕ್

ಟ್ರೋಫಿ ಜತೆಗೆ ವಿಂಬಲ್ಡನ್ ಫೈನಲಿಸ್ಟ್

ಟ್ರೋಫಿ ಜತೆಗೆ ವಿಂಬಲ್ಡನ್ ಫೈನಲಿಸ್ಟ್

ಟ್ರೋಫಿ ಜತೆಗೆ ವಿಂಬಲ್ಡನ್ ಫೈನಲಿಸ್ಟ್ ನೋವಾಕ್ ಜೋಕೋವಿಕ್ ಹಾಗೂ ರೋಜರ್ ಫೆಡರರ್

ಇಂಗ್ಲೆಂಡ್ ಪ್ರಿನ್ಸ್ ಹಾಗೂ ರಾಣಿ

ಇಂಗ್ಲೆಂಡ್ ಪ್ರಿನ್ಸ್ ಹಾಗೂ ರಾಣಿ

ಬ್ರಿಟನ್ ಪ್ರಿನ್ಸ್ ವಿಲಿಯಂ ಹಾಗೂ ಕೇಂಬ್ರಿಡ್ಜ್ ರಾಜಕುಮಾರಿ ಕೇಟ್ ಅವರು ರಾಯಲ್ ಬಾಕ್ಸ್ ಬರುತ್ತಿರುವ ದೃಶ್ಯ

ಫೈನಲ್ ಪಂದ್ಯ ವೀಕ್ಷಿಸಿದ ಬೆಕ್ ಹ್ಯಾಮ್

ಫೈನಲ್ ಪಂದ್ಯ ವೀಕ್ಷಿಸಿದ ಬೆಕ್ ಹ್ಯಾಮ್

ಫೈನಲ್ ಪಂದ್ಯ ವೀಕ್ಷಿಸಿದ ಫುಟ್ಬಾಲ್ ಪಟು ಡೇವಿಡ್ ಬೆಕ್ ಹ್ಯಾಮ್ ಹಾಗೂ ಸ್ಪೈಸ್ ಗರ್ಲ್ ಖ್ಯಾತಿಯ ವಿಕ್ಟೋರಿಯಾ

ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ

ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ

ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ 6-3, 6-0 ಸೆಟ್‌ಗಳ ಅಂತರದಿಂದ ಕೆನಡಾದ ಯೂಜಿನಿ ಬೌಶರ್ಡ್‌ ಅವರನ್ನು ಮಣಿಸಿ 2ನೇ ಬಾರಿಗೆ ವಿಂಬಲ್ಡನ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿ ಫಲಕಕ್ಕೆ ಮುತ್ತಿಟ್ಟ ಪೆಟ್ರಾ ಕ್ವಿಟೋವಾ

ಪ್ರಶಸ್ತಿ ಫಲಕಕ್ಕೆ ಮುತ್ತಿಟ್ಟ ಪೆಟ್ರಾ ಕ್ವಿಟೋವಾ

ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ವಿಜೇತೆ ಪೆಟ್ರಾ ಕ್ವಿಟೋವಾ

ಟೂರ್ನಿಯ ಶೋಧ ಎನಿಸಿದ ಬೌಶರ್ಡ್

ಟೂರ್ನಿಯ ಶೋಧ ಎನಿಸಿದ ಬೌಶರ್ಡ್

ಟೂರ್ನಿಯ ಶೋಧ ಎನಿಸಿದ ಕೆನಡಾದ ಯೂಜಿನಿ ಬೌಶರ್ಡ್‌ ಫೈನಲ್ ತನಕ ಅದ್ಬುತ ಆಟ ಪ್ರದರ್ಶಿಸಿದರೂ ಫೈನಲ್ ನಲ್ಲಿ 55ನೇ ನಿಮಿಷದಲ್ಲೇ ಕ್ವಿಟೋವಾಗೆ ಶರಣಾದರು.

ದಾಖಲೆಯ ಹಿಂದೆ ಬಿದ್ದಿದ್ದ ರೋಜರ್

ದಾಖಲೆಯ ಹಿಂದೆ ಬಿದ್ದಿದ್ದ ರೋಜರ್

ರೋಜರ್ ಫೆಡರರ್ 18ನೇ ಗ್ರಾಂಡ್ ಸ್ಲಾಮ್ ಹಾಗೂ 8ನೇ ವಿಂಬಲ್ಡನ್ ಗೆಲ್ಲುವ ಆಸೆಗೆ ನೊವಾಕ್ ತಣ್ಣಿರೆರೆಚಿದರು.

ಶರಪೋವಾ ಟೂರ್ನಿಯಿಂದ ನಿರ್ಗಮನ

ಶರಪೋವಾ ಟೂರ್ನಿಯಿಂದ ನಿರ್ಗಮನ

ಫ್ರೆಂಚ್ ಓಪನ್ ಗೆದ್ದಿರುವ ಖುಷಿಯಲ್ಲಿರುವ ಶರಪೋವಾ ಟೂರ್ನಿಯಿಂದ ಬೇಗನೇ ನಿರ್ಗಮಿಸಿದ್ದಲ್ಲದೆ ಕ್ರಿಕೆಟ್ ಪಟು ಸಚಿನ್ ಬಗ್ಗೆ ಕೊಟ್ಟ ಉತ್ತರ ಭಾರಿ ಸದ್ದು ಮಾಡಿತ್ತು[ವಿವರ ಇಲ್ಲಿ ಓದಿ]

ನಡಾಲ್ ಮನೆಗೆ ಕಳಿಸಿದ ಪಟು

ನಡಾಲ್ ಮನೆಗೆ ಕಳಿಸಿದ ಪಟು

ನಡಾಲ್ ಮನೆಗೆ ಕಳಿಸಿದ ಆಸ್ಟ್ರೇಲಿಯಾದ ಟೆನಿಸ್ ಪಟು ನಿಕ್ ಕೈಗ್ರಿಯೊಸ್

ಟೆನಿಸ್ ಪ್ರಿಯ ಕ್ರಿಕೆಟ್ ದೇವರು

ಟೆನಿಸ್ ಪ್ರಿಯ ಕ್ರಿಕೆಟ್ ದೇವರು

ಲಂಡನ್ನಿನ ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ಗೆ ಬಂದು ಟೆನಿಸ್ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್

ನಿರಾಶದಾಯಕ ಪ್ರದರ್ಶನ ವಿಲಿಯಮ್ಸ್

ನಿರಾಶದಾಯಕ ಪ್ರದರ್ಶನ ವಿಲಿಯಮ್ಸ್

ವಿಂಬಲ್ಡನ್ ನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ ವಿಲಿಯಮ್ಸ್ ಸೋದರಿಯರಾದ ಸೆರೆನಾ, ವೀನಸ್

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+