ವಿಂಬಲ್ಡನ್ ಕ್ವಾರ್ಟರ್ ಫೈನಲಿಗೆ ಸಾನಿಯಾ-ಹಿಂಗಿಸ್
ಲಂಡನ್, ಜುಲೈ 07: ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಜೋಡಿವಿಂಬಲ್ಡನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.
ಆಲ್ ಇಂಗ್ಲೆಂಡ್ ಕ್ಲಬ್‌ನ ಗ್ರಾಸ್‌ಕೋರ್ಟ್ ನಂ 6ರಲ್ಲಿ ಸೋಮವಾರ ನಡೆದ ಮಹಿಳೆಯರ ಡಬಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಸಾನಿಯಾ-ಹಿಂಗಿಸ್ ಜೋಡಿ ಕೇವಲ ಒಂದು ಗಂಟೆ 7 ನಿಮಿಷದ ಆಟದಲ್ಲಿ ಗೆಲುವು ದಾಖಲಿಸಿದೆ. ಸ್ಪೇನ್‌ನ 16ನೇ ಸೀಡ್ ನ ಅನಬೆಲ್ ಮೆಡಿನಾ ಗ್ಯಾರಿಗಸ್ ಹಾಗೂ ಅರಂಟಾ ಸಾಂಟೊಜಾರನ್ನು 6-4, 6-3 ಸೆಟ್‌ಗಳಿಂದ ಮಣಿಸಿದರು.

ಉಳಿದ ಪಂದ್ಯಗಳ ಫಲಿತಾಂಶ:
* ಪುರುಷರ ಡಬಲ್ಸ್ ಪಂದ್ಯದಲ್ಲಿ 9ನೇ ಶ್ರೇಯಾಂಕದ ಭಾರತದ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಪ್ಲೋರಿನ್ ಮೆರ್ಜಿಯಾ ಜೋಡಿ 7-6, 6-7, 7-6, 7-6 ಸೆಟ್‌ಗಳಿಂದ ಲೂಕಜ್ ಕೂಬೊಟ್ ಮತ್ತು ಮ್ಯಾಕ್ಸ್ ಮಿರ್ನಯಿ ಜೋಡಿಯನ್ನು ಸೋಲಿಸಿತು.
* 11ನೇ ಶ್ರೇಯಾಂಕದ ಲಿಯಾಂಡರ್ ಪೇಸ್ ಹಾಗೂ ಕೆನಡದ ಡೇನಿಯಲ್ ನೆಸ್ಟರ್ ಜೋಡಿ 3-6, 5-7, 6-3, 6-2, 2-6 ಸೆಟ್‌ಗಳಿಂದ 8ನೇ ಶ್ರೇಯಾಂಕದ ಆಸ್ಟ್ರಿಯಾದ ಅಲೆಕ್ಸಾಂಡರ್ ಪೆಯಾ ಮತ್ತು ಬ್ರೆಜಿಲ್ನ ಬ್ರುನೊ ಸೊರಸ್ ಜೋಡಿಗೆ ಶರಣಾಗಿದೆ.
* ಕ್ರೋಷಿಯಾದ 36 ವರ್ಷದ ಇವಾ ಕಾರ್ಲೆವಿಕ್ 7-6 (3), 4-6, 7-6 (2), 7-6 (9) ರಿಂದ 13ನೇ ಶ್ರೇಯಾಂಕದ ಜೋ ವಿಲ್ಪ್ರೆಡ್ ಸೋಂಗರನ್ನು ಮಣಿಸಿದರು. ಈ ಮೂಲಕ 1976ರಿಂದ ಈಚೆಗೆ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ 4ನೇ ಸುತ್ತಿಗೇರಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: Sania Mirza and Martina Hingis in last 8
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications