ಬೀಜಿಂಗ್, ಅಕ್ಟೋಬರ್. 11: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಮತ್ತೆ ತಮ್ಮ ಶ್ರೇಯಾಂಕವನ್ನು ಸಾಬೀತು ಮಾಡಿದ್ದಾರೆ. ಡಬ್ಲ್ಯುಟಿಎ ಚೀನಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ತಾವೇಕೆ ಡಬಲ್ಸ್ ನಲ್ಲಿ ಅಗ್ರಶೇಯಾಂಕಿತರು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ಶನಿವಾರ ನಡೆದ ಫೈನಲ್‌ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ 6-7, 6-1, 10-8ರಲ್ಲಿ ಆರನೇ ಶ್ರೇಯಾಂಕದ ಚೀನಾ ತೈಪೆಯ ಹೂ ಚಿಂಗ್ ಚಾನ್ ಮತ್ತು ಯುಂಗ್ ಜಾನ್ ಚಾನ್ ಎದುರು ಜಯಗಳಿಸಿದರು. ಒಟ್ಟು ಒಂದು ಗಂಟೆ 40 ನಿಮಿಷ ಹೋರಾಟ ಕ್ರೀಡಾ ಪ್ರೇಮಿಗಳನ್ನು ರಂಜಿಸಿತು.[ಮಿರ್ಜಾ-ಹಿಂಗಿಸ್ ಜೋಡಿ, ಯುಎಸ್ ಓಪನ್ ನಲ್ಲೂ ಮೋಡಿ]
