ಒಲಿಂಪಿಕ್ಸ್: ಟೆನಿಸ್ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಬೆಲಿಂಡಾ ಬೆನ್ಸಿಕ್

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್‌ನಲ್ಲಿ ಸ್ವಿಟ್ಜರ್ಲ್ಯಾಂಡ್‌ನ ಬೆಲಿಂಡಾ ಬೆನ್ಸಿಕ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಗುರುವಾರ (ಜುಲೈ 29) ನಡೆದ ಸೆಮಿಫೈನಲ್‌ನಲ್ಲಿ ಬೆನ್ಸಿಕ್ ಅವರು ಕಝಕೀಸ್ತಾನ ಆಟಗಾರ್ತಿ ಎಲೆನಾ ರೈಬಕಿನಾ ಅವರನ್ನು ಸೋಲಿಸಿದ್ದಾರೆ.
24ರ ಹರೆಯದ ಬೆಲಿಂಡಾ ಬೆನ್ಸಿಕ್, ಎಲೆನಾ ರೈಬಕಿನಾ ವಿರುದ್ಧ 7-6 (7/2), 4-6, 6-3ರ ಗೆಲುವು ದಾಖಲಿಸಿದರು. ಎದುರಾಳಿ ಸ್ಪರ್ಧಿ ಕೂಡ ಭರ್ಜರಿ ಪೈಪೋಟಿ ನೀಡಿದ್ದರಿಂದ ಇಬ್ಬರ ಮಧ್ಯೆ ಭರೀ ಕದನ ನಡೆಯಿತು. ಆರಂಭಿಕ ಸೆಟ್ 73 ನಿಮಿಷಗಳ ಕಾಲ ನಡೆಯಿತೆಂದರೆ ಇಬ್ಬರ ಸೆಣಸಾಟ ಹೇಗಿತ್ತೆಂದು ನೀವು ಊಹಿಸಬಹುದು.
ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿರುವ ಬೆನ್ಸಿಕ್, 1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಟೆನಿಸ್ ಮತ್ತೆ ಪರಿಚಯಿಸಿದಾಗಿನಿಂದ ಹಿಡಿದು ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಫೈನಲ್‌ಗೆ ಪ್ರವೇಶಿಸಿ 5ನೇ ಟೆನಿಸ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಫೈನಲ್‌ನಲ್ಲಿ ಬೆನ್ಸಿಕ್ ಒಂದೋ ಎಲಿನಾ ಸ್ವಿಟೋಲಿನಾ ಅಥವಾ ಮಾರ್ಕೆಟಾ ವೊಂಡ್ರೊಸೊವಾ ಸವಾಲು ಸ್ವೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications