ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಟೆನಿಸ್ನಲ್ಲಿ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೋವಿಕ್ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ನ ಕೀ ನಿಶಿಕೋರಿ ಸೋಲಿಸಿರುವ ಜೊಕೋವಿಕ್ ಸುಲಭ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ವಿಶೇಷ ಮುಖಪುಟ: ಪ್ರಮುಖ ಸುದ್ದಿಗಳು, ವೇಳಾಪಟ್ಟಿ, ಪದಕ ಪಟ್ಟಿ ಇಲ್ಲಿದೆ
ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್ ಅವರು ಕೀ ನಿಶಿಕೋರಿ ಅವರನ್ನು 6-2, 6-0ರ ನೇರ ಸೆಟ್ನಿಂದ ಸೋಲಿಸಿದ್ದಾರೆ. ಇಬ್ಬರ ಮಧ್ಯೆ 70 ನಿಮಿಗಳ ಕದನ ನಡೆಯಿತು. ಆದರೆ ಪಂದ್ಯದಲ್ಲಿ ಜೊಕೋವಿಕ್ ಪಾರಮ್ಯ ಮೆರೆದಿದ್ದು ಕಾಣಿಸಿತು.
ಒಲಿಂಪಿಕ್ಸ್ನಲ್ಲಿ ಜೊಕೋವಿಕ್ ಒಮ್ಮೆಯೂ ಸಿಂಗಲ್ಸ್ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿಲ್ಲ. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದೇ ಒಲಿಂಪಿಕ್ಸ್ ಇತಿಹಾಸದಲ್ಲಿ ಜೊಕೋವಿಕ್ ಅವರ ಅತ್ಯುತ್ತಮ ಸಾಧನೆ. ಸೆಮಿಫೈನಲ್ನಲ್ಲಿ ಜೊಕೋವಿಕ್ ಒಂದೋ ಅಲೆಕ್ಸಾಂಡರ್ ಜ್ವೆರೆವ್ ಅಥವಾ ಜೆರೆಮಿ ಚಾರ್ಡಿ ಸವಾಲು ಸ್ವೀಕರಿಸಲಿದ್ದಾರೆ.
ಧೋನಿಗೂ ನಡುಕ ಹುಟ್ಟಿಸಿದ್ದ ಈ ಸ್ಪಿನ್ನರ್ನ ಅಗತ್ಯತೆ ಟಿಟ್ವೆಂಟಿ ವಿಶ್ವಕಪ್ನಲ್ಲಿ ಭಾರತಕ್ಕಿದೆ ಎಂದ ಹರ್ಭಜನ್ ಸಿಂಗ್
34ರ ಹರೆಯದ ಜೊಕೋವಿಕ್ ಈ ವರ್ಷ ಈಗಾಗಲೇ ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಒಲಿಂಪಿಕ್ಸ್ನಲ್ಲೂ ಬಂಗಾರ ಗೆದ್ದರೆ ಇದು ವಿಶ್ವ ದಾಖಲೆ ಎನಿಸಲಿದೆ.