For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸುಮಿತ್ ನಗಾಲ್, ಗಾಯದಿಂದ ಯುಕಿ ಭಾಂಬ್ರಿ ಔಟ್

Tokyo olympics: Sumit Nagal qualified for the Tokyo singles draw

ಭಾರತೀಯ ಟೆನ್ನಿಸ್ ಆಟಗಾರ ಸುಮಿತ್ ನಗಾಲ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಿಶ್ವ ಟೆನಿಸ್ ಆಡಳಿತ ಸಂಸ್ಥೆ ಐಟಿಎಫ್ ಈ ಬಗ್ಗೆ ಆಲ್‌ ಇಂಡಿಯಾ ಟೆನ್ನಿಸ್ ಅಸೋಸಿಯೇಶನ್‌ಗೆ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ರಾಷ್ಟ್ರೀಯ ಟೆನ್ನಿಸ್ ಸಂಸ್ಥೆ ತಿಳಿಸಿದೆ.

ಒಲಿಂಪಿಕ್ಸ್‌ಬಲ್ಲಿ ಭಾಗಿಯಾಗಲು ನೇರ ಅರ್ಹತೆಯನ್ನು ಪಡೆಯಲು ಜೂನ್ 14ರ ಶ್ರೇಯಾಂಕವನ್ನು ಪರಿಗಣಿಸಲಾಗಿದ್ದು ಅಂದು ಸಮಿತ್ 144ನೇ ಶ್ರೇಯಾಂಕದಲ್ಲಿದ್ದರು. ಈ ಸಂದರ್ಭದಲ್ಲಿ ಮತ್ತೋರ್ವ ಸಿಂಗಲ್ಸ್ ಸ್ಪೆಶಲಿಸ್ಟ್ ಪ್ರಜ್ನೇಶ್ ಗುನ್ನೇಶ್ವರನ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ನಿಗದಿಪಡಿಸಿದ ದಿನದಂದು ಅವರು 148ನೇ ಶ್ರೇಯಾಂಕದಲ್ಲಿದ್ದರು.

ಕೊರೊನಾವೈರಸ್‌ನ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳು ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ನ ಅರ್ಹತೆಗೆ ನಿಗದಿಪಡಿಸಿರುವ ಕಟ್‌-ಆಫ್ ಅಂಕಗಳನ್ನು ಕಡಿಮೆ ಮಾಡಲಾಗಿತ್ತು.

"ಐಟಿಎಫ್‌ನಿಂದ ನಾವು ಮೇಲ್ ಸಂದೇಶವನ್ನು ಸ್ವೀಕರಿಸಿದ್ದು ಸುಮಿತ್ ಈಗ ಅರ್ಹತೆಯನ್ನು ಸಂಪಾದಿಸಿದ್ದಾರೆ. ಅವರು ಸಮಿತ್ ಅವರ ಬಗ್ಗೆ ಮಾಹಿತಿಗಳನ್ನು ಕೇಳಿದ್ದಾರೆ. ಅವರನ್ನು ಒಲಿಂಪಿಕ್ಸ್ ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ" ಎಂದು ಎಐಟಿಎಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಯುಕಿ ಭಾಂಬ್ರಿ 127ನೇ ಶ್ರೇಯಾಂಕದೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದರು. ಆದರೆ ಇತ್ತಿಚೆಗೆ ಮೊಣಕಾಲಿಗೆ ಗಾಯವಾಗಿರುವ ಕಾರಣ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

Story first published: Friday, July 16, 2021, 15:59 [IST]
Other articles published on Jul 16, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+