ಇಬ್ಬರು ರಷ್ಯನ್ ಟೆನಿಸ್ ಆಟಗಾರ್ತಿಯರಿಗೆ ಆಜೀವ ನಿಷೇಧ ಶಿಕ್ಷೆ

ಮಾಸ್ಕೋ: ರಷ್ಯಾದ ಇಬ್ಬರು ಟೆನಿಸ್ ಆಟಗಾರ್ತಿಯರ ಮೇಲೆ ಆಜೀವ ನಿಷೇಧ ಹೇರಲಾಗಿದೆ. ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಕ್ಕಾಗಿ ಇಬ್ಬರು ಆಟಗಾರ್ತಿಯರು ಜೀವನಪರ್ಯಾಂತ ನಿಷೇಧಕ್ಕೀಡಾಗಿದ್ದಾರೆ. ಡಬಲ್ಸ್ ಆಡುವ ವೇಳೆ ಇಬ್ಬರು ಫಿಕ್ಸಿಂಗ್‌ಗೆ ಯತ್ನಿಸಿದ್ದರು ಎನ್ನಲಾಗಿದೆ.
ಅಲಿಜಾ ಮೆರ್ಡೀವಾ ಅವರು ಮ್ಯಾಚ್ ಫಿಕ್ಸಿಂಗ್‌ಗಾಗಿ ನಡೆಸಿದ ತನಿಖೆ ವೇಳೆ ತಪ್ಪಿತಸ್ಥರಾಗಿ ಕಂಡುಬಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಸಮಗ್ರತೆ ಸಂಸ್ಥೆ ಹೇಳಿದೆ. ಸೋಫಿಯಾ ಡಿಮಿಟ್ರಿವಾ ಕೂಡ ಆರು ಬಾರಿ ಮಾಚ್ ಫಿಕ್ಸಿಂಗ್ ನಡೆಸಿದ ತಪ್ಪಿಗಾಗಿ ಸಿಕ್ಕಿಬಿದ್ದಿದ್ದಾರೆ.
ಡಿಮಿಟ್ರಿವಾ ಫಿಕ್ಸಿಂಗ್ ನಡೆಸಿದ್ದಷ್ಟೇ ಅಲ್ಲ, ತನಿಖೆ ವೇಳೆ ಅಸಹಾಕಾರ ಕೂಡ ತೋರಿ ತಪ್ಪೆಸಗಿದ್ದಾರೆ ಎಂದು ಇಂಟರ್ ನ್ಯಾಷನಲ್ ಟೆನಿಸ್ ಇಂಟಗ್ರಿಟಿ (ಐಟಿಐಎ) ಹೇಳಿದೆ. ಡಬಲ್ಸ್‌ನಲ್ಲಿ ಪಾರ್ಟ್ನರ್ ಆಗಿ ಇಬ್ಬರೂ ಎರಡು ಪಂದ್ಯಗಳಲ್ಲಿ ಆಡಿದ್ದರು. ಇದರಲ್ಲಿ ಯಾವ ಪಂದ್ಯಕ್ಕೆ ಫಿಕ್ಸಿಂಗ್ ಪರಿಣಾಮ ಬೀರಿದೆ ಎಂದು ಐಟಿಐಎ ತಿಳಿಸಿಲ್ಲ.
ಕೆಳ ಮಟ್ಟದ ಪ್ರೋ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಮೆರ್ಡೀವಾ ಮತ್ತು ಡಿಮಿಟ್ರಿವಾ ವಿಶ್ವ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಆಫ್ರಿಕಾ, ಟರ್ಕಿ, ಈಸ್ಟರ್ನ್ ಯುರೋಪ್ ಹೀಗೆ ಹಲವೆಡೆ ಇಬ್ಬರೂ ಸಾಕಷ್ಟು ಬಾರಿ ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications