For Quick Alerts
ALLOW NOTIFICATIONS  
For Daily Alerts

ಹೊಸ ದಾಖಲೆ ನಿರ್ಮಿಸಿದ ಲಿಯಾಂಡರ್ ಪೇಸ್

ಯೂಯಾರ್ಕ್‌, ಸೆಪ್ಟೆಂಬರ್. 12 : ಯುಎಸ್‌ ಓಪನ್‌ ನ ಮಿಕ್ಸೆಡ್ ಡಬಲ್ಸ್ ಚಾಂಪಿಯನ್ನ ಆಗಿ ಭಾರತದ ಲಿಯಾಂಡರ್ ಪೇಸ್‌ ಮತ್ತು ಸ್ವಿಸ್‌ ಟೆನಿಸ್‌ ತಾರೆ ಮಾರ್ಟಿನಾ ಹಿಂಗಿಸ್‌ ಹೊರಹೊಮ್ಮಿದ್ದಾರೆ.

ಲಿಯಾಂಡರ್ ಪೇಸ್‌ ಮತ್ತು ಮಾರ್ಟಿನಾ ಹಿಂಗಿಸ್‌ ಫೈನಲ್ ನಲ್ಲಿ ಅಮೆರಿಕ್ ಬೆಂಥೈನ್ ಮಟೀಕ್ ಸಾಂಡ್ಸ್ ಮತ್ತು ಸ್ಯಾಮ್ ಕ್ಯಾರ್ರಿ ಅವರನ್ನು 6-4, 3-6 ಮತ್ತು 10-7 ರ ಅಂತರದಲ್ಲಿ ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.[ಕ್ರಿಕೆಟರ್ ವಿರಾಟ್ ಕೊಹ್ಲಿ ತಂಡದಲ್ಲಿ ಫೆಡರರ್ ಆಟ!]

spots

ಈ ಮೂಲಕ ಲಿಯಾಂಡರ್ ಪೇಸ್ ಎಂಟು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಂತೆ ಆಗಿದ್ದು ತಮ್ಮ ಒಂದು ಕಾಲದ ಜತೆಗಾರ ಮಹೇಶ್ ಭೂಪತಿ ಅವರ ದಾಖಲೆಯನ್ನು ಹಿಂದಕ್ಕೆ ಹಾಕಿದ್ದಾರೆ.

ಹೊಸ ದಾಖಲೆ
1969 ನಂತರ ಟೆನಿಸ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಪೇಸ್-ಹಿಂಗಿಸ್ ಜೋಡಿ ನಿರ್ಮಿಸಿದೆ. ಒಂದೇ ವರ್ಷದಲ್ಲಿ ಮೂರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಜೋಡಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.[ಟೆನಿಸ್ ತಾರೆ ಲಿಯಾಂಡರ್ ಪೇಸ್ ಅಪೂರ್ವ ಸಾಧನೆ ಪಟ್ಟಿ]

ಕೊನೆಯ ಸೆಟ್ ನಲ್ಲಿ ಎರಡು ಕಡೆಯವರು ಅದ್ಭುತ ಆಟ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ 7-7 ಸಮಬಲದ ಹೋರಾಟ ನಡೆಯುತ್ತಿತ್ತು. ಆದರೆ ಈ ಹಂತದಲ್ಲಿ ಎಂದಿನ ಲಯಕ್ಕೆ ಮರಳಿದ ಮಾರ್ಟಿನಾ ಹಿಂಗಿಸ್ ಅಂಕಗಳನ್ನು ಗಳಿಸಿಕೊಂಡು ಪ್ರಶಸ್ತಿ ಮೇಲೆ ಹಕ್ಕು ಸ್ಥಾಪಿಸಿದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+