ಯೂಎಸ್ ಓಪನ್ 2018: ಬಲಿಷ್ಟ ರೋಜರ್ ಫೆಡರರ್ ಹೊರಗಟ್ಟಿದ ಮಿಲ್ಮನ್


ನ್ಯೂಯಾರ್ಕ್, ಸೆಪ್ಟೆಂಬರ್ 3: ಪುರುಷರ ಟೆನಿಸ್ ಬಲಿಷ್ಟರಾದ ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತು ಸ್ವಿಟ್ಜರ್ ಲ್ಯಾಂಡ್ ಅಗ್ರ ಶ್ರೇಯಾಂಕಿತ ರೋಜರ್ ಫೆಡರರ್ ಯೂಎಸ್ ಓಪನ್ ಟೆನಿಸ್ ಕ್ವಾರ್ಟರ್ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿಲ್ಲ. ಕಾರಣ ಫೆಡರರ್ ಅವರು ಶ್ರೇಯಾಂಕಿತರಲ್ಲದ ಜಾನ್ ಮಿಲ್ಮನ್ ಅವರೆದುರು ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಟೆನಿಸ್ ಅಂಗಣದಲ್ಲಿನ ಬಲಿಷ್ಟ ಆಟಗಾರರಾದ ಫೆಡರರ್ ಮತ್ತು ಜೊಕೊವಿಕ್ ಮುಖಾಮುಖಿಯಾಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಮಂಗಳವಾರ ನಡೆದ ಯೂಎಸ್ ಓಪನ್ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಫೆಡರರ್, ಆಸ್ಟ್ರೇಲಿಯಾ ಆಟಗಾರ ಮಿಲ್ಮನ್ ವಿರುದ್ಧ ಸೋತು ಆಘಾತವನ್ನನುಭವಿಸಿದ್ದಾರೆ.
ಸೆಪ್ಟೆಂಬರ್ 4ರಂದು ನಡೆದ ಪಂದ್ಯದಲ್ಲಿ ಫೆಡರರ್ ಮತ್ತು ಮಿಲ್ಮನ್ ನಡುವೆ ಭರ್ಜರಿ ಕಾಳಗ ನಡೆಯಿತು. ಅಂತಿಮವಾಗಿ ಮಿಲ್ಮನ್ 3-6, 7-5, 7-6 (9-7), 7-6 (7-3) ಅಂತರದಿಂದ ಮೇಲುಗೈ ಸಾಧಿಸಿದರು. ಇಲ್ಲಿಗೆ ಈಬಾರಿಯ ಯೂಎಸ್ ಓಪನ್ ನಲ್ಲಿ ಫೆಡರರ್ ಸ್ಪರ್ಧೆ ಕೊನೆಗೊಂಡಿದೆ.
ನ್ಯೂಯಾರ್ಕ್ ಟೆನಿಸ್ ಅಂಕಣದಲ್ಲಿ ಫೆಡರರ್ ಗೆ ಈ ಪರಿಯ ಸೋಲು ಮೊದಲನೆಯದು. ವಿಶ್ವ ರ್ಯಾಂಕಿಂಗ್ ನಲ್ಲಿ 50ರ ಕೆಳಗಿನ ಆಟಗಾರನಿಗೆ ಪೆಡರರ್ ಪಂದ್ಯ ಬಿಟ್ಟುಕೊಟ್ಟ ಕೆಟ್ಟ ದಾಖಲೆಗೆ ಈ ಪಂದ್ಯ ಸಾಕ್ಷಿಯಾಯಿತು. ಮುಂದಿನ (ಸೆ. 5) ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮಿಲ್ಮನ್ ಮತ್ತು ಜೊಕೋವಿಕ್ ಮುಖಾಮುಖಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications