ಕಳೆದ ವರ್ಷದ ಮೂರು ಗ್ರ್ಯಾಂಡ್‌ಸ್ಲ್ಯಾ್‌ಗಳಿಂದ ಹೊರಬಿದ್ದಿದ್ದ ಜೆಕ್ ರಿಪಬ್ಲಿಕ್‌ನ ಮಾರ್ಕೆಟ ವೊಂಡ್ರೋಸೊವಾ ಕಳೆದ ವಿಂಬಲ್ಡನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನಸಳೆದಿದ್ದರು. ಇದೀಗ ಈ ಮೂಲಕ ಅಗ್ರ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಯುಎಸ್ ಓಪನ್‌ನಲ್ಲಿ ಮೊದಲ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
24ರ ಹರೆಯದ ವೊಂಡ್ರೊಸೊವಾ ಅವರಿಗೆ ಸೆಪ್ಟೆಂಬರ್ 4ರ ಸೋಮವಾರ ನಡೆದ ಪಂದ್ಯದಲ್ಲಿ ಎದುರಾಳಿಗಾಗಿದಿದ್ದು ಶ್ರೇಯಾಂಕ ರಹಿತ ಅಮೆರಿಕನ್ ಆಟಗಾರ್ತಿ ಪೇಟನ್ ಸ್ಟೆರ್ನ್ಸ್. ಇವರ ವಿರುದ್ಧ ನಡೆದ ರೌಂಡ್ ಆಫ್ 4ರಲ್ಲಿ ವೊಂಡ್ರೊಸೊವಾ 6-7 (3), 6-3, 6-2 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೊಂಡ್ರೊಸೊವಾ ಮೂರನೇ ಸೆಟ್‌ನಲ್ಲಿ ಸ್ಟೆರ್ನ್ಸ್ ಮಾಡಿದ 21 ಬಲವಂತದ ತಪ್ಪುಗಳ ಲಾಭವನ್ನು ಪಡೆದರು ಅಲ್ಲದೆ ಏಳು ಬ್ರೇಕ್‌ಗಳನ್ನು ಯಶಸ್ವಿಯಾಗಿ ಸಾಧಿಸಿದರು. ಮುಂದಿನ ಸುತ್ತು ಕ್ವಾರ್ಟರ್‌ಫೈನಲ್‌ನಲ್ಲಿ ವೊಂಡ್ರೊಸೊವಾ ವಿಶ್ವ ನಂ.3 ಜೆಸ್ಸಿಕಾ ಪೆಗುಲಾ ವಿರುದ್ಧ ಜಯಗಳಿಸಿದ ಮ್ಯಾಡಿಸನ್ ಕೀಸ್ ಅವರ ಸವಾಲನ್ನು ಎದುರಿಸಬೇಕಿದೆ.
ಈ ಮಧ್ಯೆ 2023ರ ಯುಎಸ್ ಓಪನ್ ಮೂಲಕ ಮ್ಯಾಡಿಸನ್ ಕೀಸ್ ಬರೊಬ್ಬರಿ ಐದು ವರ್ಷಗಳ ನಂತರ ಕ್ವಾರ್ಟರ್-ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಜೆಸ್ಸಿಕಾ ಪೆಗುಲಾ ಹಾಗೂ ಮ್ಯಾಡಿಸನ್ ಕೀಸ್ ವಿರುದ್ಧ ನಡೆದ ಈ ಸೆಣೆಸಾಟದ 61 ನಿಮಿಷಗಳ ಕಾಲ ನಡೆದಿದ್ದು ಇದರಲ್ಲಿ 6-1, 6-3 ಅಂಕಗಳೊಂದಿಗೆ ಮೂರನೇ ಶ್ರೇಯಾಂಕದ ಪೆಗುಲಾ ಅವರನ್ನು ಕೀಸ್ ಮಣಸಿದ್ದಾರೆ. ಕೀಸ್ ಪಾಲಿಗೆ ಇದು ನಿಸ್ಸಂಶಯವಾಗಿ ಉತ್ತಮ ಪಂದ್ಯವಾಗಿತ್ತು. 2018ರ ಬಳಿಕ ಮೊದಲ ಬಾರಿಗೆ ಅವರು ಸತತವಾಗಿ ಕ್ವಾರ್ಟರ್-ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂಬರ್ 1 ಲಾರ್ಲೋಸ್ ಅಲ್ಕರೇಜ್ ಸುಲಭ ಗೆಲುವಿನೊಂದಿಗೆ ಯುಎಸ್ 2023ರಲ್ಲಿ ಕ್ವಾರ್ಟರ್‌ಫೈಬಲ್‌ಗೆ ಪ್ರವೇಶಿಸಿದ್ದಾರೆ. ನಾಲ್ಕನೇ ಸುತ್ತಿನಲ್ಲಿ ಅನ್‌ಸೀಡೆಸ್ ಆಟಗಾರ ಇಟೆಲಿಯ ಮಡೆಯೋ ಅರ್ನಾಲ್ಡ್ ಅವರನ್ನು ಎದುರಿಸಿದ ಅಲ್ಕರೇಜ್ ಒಂದು ಗಂಟೆ 57 ನಿಮಿಷದಲ್ಲಿ ಪಂದ್ಯವನ್ನು ಅಂತ್ಯಗೊಳಿಸಿದ್ದರು. 6-3 6-3 6-4 ಅಂತರದಿಂದ ಸುಲಭ ಗೆಲುವು ಸಾಧಿಸಿರುವ ಅಲ್ಕರೇಜ್ ಸತತ ಮೂರನೇ ಬಾರಿಗೆ ಅಂತಿಮ ಎಂಟರ ಘಟ್ಟದಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದ್ದಾರೆ